ಮುಂಬಯಿ: ಷೇರು ಮಾರುಕಟ್ಟೆಯಲ್ಲಿ (Stock Market) ಇಂದು ಅದಾನಿ ಗ್ರೂಪ್‌ನ (Adani Group) ಷೇರು ದರಗಗಳು ಶೇಕಡಾ 13ರಷ್ಟು ಕುಸಿದವು. ಮಧ್ಯಾಹ್ನ 12 ಗಂಟೆಯ ವೇಳೆಗೆ ಅದಾನಿ ಗ್ರೂಪ್ ಮಾರುಕಟ್ಟೆ ಬಂಡವಾಳದಲ್ಲಿ ಸುಮಾರು ₹90,000 ಕೋಟಿಗಳನ್ನು ಕಳೆದುಕೊಂಡಿತು.
ಇಂದು ಎಲ್ಲಾ 10 ಅದಾನಿ ಕಂಪನಿ ಕೌಂಟರ್‌ಗಳ ವಹಿವಾಟು ರೆಡ್ ಮಾರ್ಕ್‌ನಲ್ಲಿದ್ದವು. ಇವುಗಳಲ್ಲಿ ಅದಾನಿ ಗ್ರೀನ್ ಎನರ್ಜಿ ಟಾಪ್ ಲೂಸರ್ ಆಗಿದ್ದು, ಎನ್‌ಎಸ್‌ಇಯಲ್ಲಿ 13 ಪ್ರತಿಶತದಷ್ಟು ಕುಸಿದು ₹1,650ಕ್ಕೆ ತಲುಪಿದೆ. ಇದು 2024ರಲ್ಲಿ ಅದಾನಿ ಗ್ರೀನ್ ಎನರ್ಜಿಯ ಷೇರುಗಳು ಇಲ್ಲಿಯವರೆಗೆ ಕಂಡ ಒಂದು ದಿನದ ಅತಿದೊಡ್ಡ ಕುಸಿತವಾಗಿದೆ.
ಇತರ ಅದಾನಿ ಗ್ರೂಪ್ ಷೇರುಗಳಲ್ಲಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಎಸ್‌ಇಜೆಡ್ ಕ್ರಮವಾಗಿ ಶೇ.5.5 ಮತ್ತು ಶೇ.5.3 ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ. ಅದಾನಿ ಎನರ್ಜಿ ಸಲ್ಯೂಷನ್ಸ್, ಅದಾನಿ ಪವರ್, ಅದಾನಿ ಟೋಟಲ್ ಗ್ಯಾಸ್, ಎನ್‌ಡಿಟಿವಿ ಮತ್ತು ಅದಾನಿ ವಿಲ್ಮಾರ್ ಶೇ.4ರಿಂದ 7ರಷ್ಟು ಕುಸಿದಿವೆ.
ಈ ಭಾರಿ ಪತನದ ಹಿಂದೆ ಏನಿದೆ ಎಂದು ತರ್ಕಿಸಲಾಗಿದೆ. ಅದಾನಿ ಎಂಟರ್‌ಪ್ರೈಸಸ್‌ಗೆ ಇದು ಸತತ ಏಳನೇ ದಿನದ ಕುಸಿತವಾಗಿದೆ. 52 ವಾರಗಳಲ್ಲಿ ಇದರ ದರ ಸುಮಾರು 100 ಪ್ರತಿಶತದಷ್ಟು ಕುಸಿದಿದ್ದು ಕನಿಷ್ಠ ₹1,573ರಲ್ಲಿ ವಹಿವಾಟು ನಡೆಸುತ್ತಿದೆ.
ಇಂದಿನ ಕುಸಿತದೊಂದಿಗೆ, ಅದಾನಿ ಗ್ರೂಪ್ ಷೇರುಗಳು ಮಾರುಕಟ್ಟೆ ಬಂಡವಾಳದಲ್ಲಿ ₹90,000 ಕೋಟಿಗಳನ್ನು ಕಳೆದುಕೊಂಡಿವೆ. ಮಂಗಳವಾರದ ಹೊತ್ತಿಗೆ ಗುಂಪಿನ ಒಟ್ಟಾರೆ ಮಾರುಕಟ್ಟೆ ಮೌಲ್ಯದ 5.7% ಅಂದರೆ ಸುಮಾರು ₹15.85 ಲಕ್ಷ ಕೋಟಿ ನಷ್ಟವಾಗಿದೆ.
ಬ್ರೋಕರೇಜ್ ಸಂಸ್ಥೆಗಳಾದ HSBC ಮತ್ತು ಮೋತಿಲಾಲ್ ಓಸ್ವಾಲ್, ಅದಾನಿ ಪೋರ್ಟ್ಸ್‌ನಲ್ಲಿ ಟಾರ್ಗೆಟ್ ಬೆಲೆಗಳನ್ನು ಹೆಚ್ಚಿಸಿದವು. ಕಂಪನಿಯು ಪೂರ್ಣ ಹಣಕಾಸು ವರ್ಷದಲ್ಲಿ ನಿಗದಿತ ಹೆಚ್ಚಿನ ಸರಕು ಪರಿಮಾಣವನ್ನು ಮೀರಬಹುದು ಎಂದು ತೋರಿಸಿ ಸ್ಟಾಕ್‌ನಲ್ಲಿ ತಮ್ಮ “ಖರೀದಿ” ಕರೆಗಳನ್ನು ಪುನರುಚ್ಚರಿಸಿದವು. ಅದಾನಿ ಎಂಟರ್‌ಪ್ರೈಸಸ್‌ಗೆ ಜೆಫರೀಸ್ “ಖರೀದಿ” ಟ್ಯಾಗ್‌ನೊಂದಿಗೆ ಕವರೇಜ್ ಅನ್ನು ಪ್ರಾರಂಭಿಸಿತು. ಷೇರುಗಳ ಮೇಲೆ ₹3,800 ಗುರಿಯ ಬೆಲೆಯನ್ನು ನಿಗದಿಪಡಿಸಿತು.
ಇದನ್ನೂ ಓದಿ: Adani Group: ಎಲೆಕ್ಟ್ರಿಕ್ ಪ್ರಯಾಣಿಕ ಕಾರುಗಳಿಗಾಗಿ ಅದಾನಿ ಗ್ರೂಪ್- ಉಬರ್ ನಡುವೆ ಮಾತುಕತೆ