ನವ ದೆಹಲಿ: ಅದಾನಿ ಗ್ರೂಪ್ (Adani Group) ಮತ್ತು ಹಿಂಡೆನ್ ಬರ್ಗ್ ನಡುವಣ ವಿವಾದದ ಕುರಿತು ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ನಡೆಸುತ್ತಿರುವ ತನಿಖೆಗೆ 6 ತಿಂಗಳಿನ ಹೆಚ್ಚುವರಿ ಕಾಲಾವಕಾಶ ನೀಡಲು ಸುಪ್ರೀಂಕೋರ್ಟ್ (supreme court) ಶುಕ್ರವಾರ ನಿರಾಕರಿಸಿದೆ.
ಅದಾನಿ ಗ್ರೂಪ್-ಹಿಂಡೆನ್ ಬರ್ಗ್ ವಿವಾದದ ತನಿಖೆಯನ್ನು (Adani-Hindenburg row) ಮುಂದುವರಿಸಲು ಆರು ತಿಂಗಳು ಹೆಚ್ಚುವರಿ ಕಾಲಾವಕಾಶವನ್ನು ಸೆಬಿ ಕೋರಿತ್ತು. ಮಾಡುವ ಕೆಲಸದಲ್ಲಿ ಚುರುಕುತನ ಇರಬೇಕು. ಆಗಸ್ಟ್ ಮಧ್ಯಭಾಗದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ. ಆ ವೇಳೆಗೆ ಸೆಬಿಯ ವರದಿ ತಲುಪಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಹೇಳಿದೆ.
ಇದನ್ನೂ ಓದಿ: Adani Group : ಹಿಂಡೆನ್ ಬರ್ಗ್ ಆರೋಪಗಳು ಭಾರತದ ಮೇಲಿನ ದಾಳಿ, ಸುಳ್ಳಿನ ಕಂತೆ, ಅದಾನಿ ತಿರುಗೇಟು, 413 ಪುಟಗಳ ರೆಸ್ಪಾನ್ಸ್
ಪ್ರಕರಣದಲ್ಲಿ ಸೆಬಿ ಯಾವುದೇ ರೀತಿಯಲ್ಲಿ ವಿಫಲವಾಗಿಲ್ಲ. ಆದ್ದರಿಂದ ಅದರ ಬಗ್ಗೆ ಆರೋಪಿಸುವಾಗ ಹುಷಾರಾಗಿರಿ ಎಂದು ಅರ್ಜಿದಾರರ ಪರ ವಕೀಲ ಜಯಾ ಠಾಕೂರ್‌ಗೆ ಕೋರ್ಟ್ ಎಚ್ಚರಿಸಿತು.