ನವ ದೆಹಲಿ: ಅದಾನಿ ಗ್ರೂಪ್ (Adani Group) 3 ಶತಕೋಟಿ ಡಾಲರ್ (24,600 ಕೋಟಿ ರೂ.) ಸಾಲವನ್ನು ಸಾವರಿನ್ ವೆಲ್ತ್ ಫಂಡ್‌ನಿಂದ ಪಡೆದಿದೆ ಎಂದು ವರದಿಯಾಗಿದೆ. ಅಮೆರಿಕದ ಶಾರ್ಟ್‌ಸೆಲ್ಲರ್ ಹಿಂಡೆನ್‌ಬರ್ಗ್, ಕಳೆದ ಜನವರಿ 24ರಂದು ಅದಾನಿ ಗ್ರೂಪ್ ವಿರುದ್ಧ ವರದಿಯನ್ನು ಪ್ರಕಟಿಸಿದ ಬಳಿಕ ಸಮೂಹದ ಕಂಪನಿಗಳ ಷೇರುಗಳು ನೆಲಕಚ್ಚಿತ್ತು. ಹೀಗಾಗಿ ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ಅದಾನಿ ಗ್ರೂಪ್ ಹಲವು ಕ್ರಮಗಳನ್ನು ಕೈಗೊಂಡಿದೆ.
ಸಾವರಿನ್ ವೆಲ್ತ್ ಫಂಡ್‌ನಿಂದ ಅದಾನಿ ಗ್ರೂಪ್ 41,000 ಕೋಟಿ ರೂ. ತನಕ ಸಾಲ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ ಸಾವರಿನ್ ವೆಲ್ತ್ ಫಂಡ್‌ನ ವಿವರಗಳು ಬಹಿರಂಗವಾಗಿಲ್ಲ. ಅದಾನಿ ಸಮೂಹದ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯದಲ್ಲಿ ಕಳೆದ ಜನವರಿ 24ರಿಂದ 12 ಲಕ್ಷ ಕೋಟಿ ರೂ. ನಷ್ಟವಾಗಿದೆ.