ನವದೆಹಲಿ: ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ (Hindenburg) ವರದಿಯ ಬೆನ್ನಲ್ಲೇ ಸಾಕಷ್ಟು ನಷ್ಟವನ್ನು ಅನುಭವಿಸಿದ್ದ ಅದಾನಿ ಗ್ರೂಪ್ (Adani Group) ಈಗ ಸಾಲಗಾರರ ವಿಶ್ವಾಸವನ್ನು ಗೆಲ್ಲುವ ಪ್ರಯತ್ನವನ್ನು ಮಾಡುತ್ತದೆ. ಅಂಬುಜಾ ಸಿಮೆಂಟ್ (Ambuja Cement) ಕಂಪನಿಯ ಖರೀದಿಗೆ ಮರು ಹಣಕಾಸು ಹೊಂದಿಸಲು 3.5 ಶತಕೋಟಿ ಡಾಲರ್ ಸಾಲವನ್ನು (Loan Deal) ಈ ವಾರ ಪೂರೈಸಲಿದ್ದಾರೆ. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲವನ್ನು ವಿಸ್ತರಿಸಲು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಈ ಮೂಲಕ ಅದಾನಿ ಗ್ರೂಪ್ ಆರ್ಥಿಕ ಸ್ಥಿರತೆಯು ಸಾಲಗಾರರಲ್ಲಿ ವಿಶ್ವಾಸವನ್ನು ಹೆಚ್ಚಿಸುವ ಲಕ್ಷಣಗಳನ್ನು ತೋರಿಸುತ್ತದೆ. ಈ ವಾರ ಪೂರ್ತಿಯಾಗಲಿರುವ ಈ ಡೀಲ್ ಪ್ರಸಕ್ತ ಸಾಲಿನ ಏಷ್ಯಾದ ಅತಿ ದೊಡ್ಡ ಸಾಲದ ಡೀಲ್ ಎನಿಸಿಕೊಳ್ಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಮೂಲಗಳನ್ನು ಉಲ್ಲೇಖಿಸಿಗ ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಬಾರ್ಕ್ಲೇಸ್, ಡಾಯ್ಚ ಬ್ಯಾಂಕ್ ಮತ್ತು ಸ್ಟ್ಯಾಂಡರ್ಡ್ ಚಾರ್ಟರ್ಡ್ ಸೇರಿದಂತೆ 18 ಜಾಗತಿಕ ಬ್ಯಾಂಕ್‌ಗಳು ಸಾಲವನ್ನು ಮರುಹಣಕಾಸು ಮಾಡಲು ಗುಂಪಿನೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಲೋನ್ ಒಪ್ಪಂದದ ಪ್ರಕಾರ, ಅದಾನಿ ಗ್ರೂಪ್ ಪ್ರವರ್ತಕರಾಗಿರುವ ಗೌತಮ್ ಅದಾನಿ ಕುಟುಂಬವು 30 ಕೋಟಿ ಡಾಲರ್ ಮರುಪಾವತಿ ಮಾಡಬೇಕಿದೆ. ಮುಂದಿನ ಮೂರು ತಿಂಗಳಲ್ಲಿ ಶತಕೋಟಿ ಡಾಲರ್ ಉಳಿಕೆಗೆ ಈ ಮರು ಹಣಕಾಸು ನೆರವು ನೀಡಲಿದೆ ಎಂದು ಇಟಿ ವರದಿ ಮಾಡಿದೆ. ಅಂಬುಜಾ ಮತ್ತು ಎಸಿಸಿ ಲೋನ್ಸ್‌ಗೆ ಸಂಬಂಧಿಸಿದಂತೆ ಅದಾನಿ ಗ್ರೂಪ್ 2 ಶತಕೋಟಿ ಡಾಲರ್ ಮರುಪಾವತಿ ಮಾಡಿದೆ ಎಂದು ಹೇಳಲಾಗುತ್ತಿದೆ.
ಅದಾನಿ ಗ್ರೂಪ್‌ಗೆ ಸಾಲ ನೀಡಿದ 18 ಸಾಲದಾರಲ್ಲಿ ಎಂಯುಎಫ್‌ಜಿ, ಮಿಜುಹೋ, ಎಸ್‌ಎಂಬಿಸಿ, ಡಿಬಿಎಸ್, ಫಸ್ಟ್ ಅಬುಧಾಬಿ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಬಾರ್ಕ್ಲೇಸ್, ಡಾಯ್ಚ ಬ್ಯಾಂಕ್, ಐಎನ್‌ಜಿ, ಬಿಎನ್‍ಪಿ ಪರಿಬಾಸ್ ಮತ್ತು ಕತಾರ್‌ನ ಕ್ಯೂಎನ್‌ಬಿ ಕೂಡ ಸೇರಿವೆ.
ಈ ಸುದ್ದಿಯನ್ನೂ ಓದಿ: Adani Group: 11 ಲಕ್ಷ ಕೋಟಿ ರೂ. ದಾಟಿದ ಅದಾನಿ ಗ್ರೂಪ್ ಮಾರುಕಟ್ಟೆ ಮೌಲ್ಯ! ಹತ್ತು ತಿಂಗಳಲ್ಲೇ ಷೇರ್ ಬೆಲೆ ಗರಿಷ್ಠ ಏರಿಕೆ
ಷೇರು ವ್ಯವಹಾರಗಳ ಕುರಿತಾದ ಅಕ್ರಮವನ್ನು ಶಾರ್ಟ್ ಸೆಲ್ಲರ್ ಹೊರ ಹಾಕುವ ಮೊದಲು ಗೌತಮ್ ಅದಾನಿ ಅವರು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. ಆರೋಪ ಕೇಳಿ ಬಂದ ವಾರದೊಳಗೇ, ಷೇರು ಮೌಲ್ಯ ಕುಸಿದ ಅವರ ಸಂಸ್ಥೆಯ ಒಟ್ಟು ಮೌಲ್ಯವು 40 ಶತಕೋಟಿ ಡಾಲರ್‌ನಷ್ಟು ನಷ್ಟವಾಯಿತು.
ಕಳೆದ ಕೆಲವು ತಿಂಗಳುಗಳಲ್ಲಿ, ಅದಾನಿ ಗ್ರೂಪ್‌ನ ಷೇರುಗಳಲ್ಲಿ ಭಾರತೀಯ-ಅಮೆರಿಕನ್ ಹೂಡಿಕೆದಾರ ರಾಜೀವ್ ಜೈನ್ ಮತ್ತು ಹೂಡಿಕೆದಾರರ ವಿಶ್ವಾಸವನ್ನು ಪ್ರೇರೇಪಿಸಿದ ಇತರ ತುರ್ತು ಕ್ರಮಗಳಿಂದಾಗಿ ಅದಾನಿ ಕಳೆದುಹೋದ ತನ್ನ ಸಂಪತ್ತನ್ನು ಮರಳಿ ಪಡೆಯುತ್ತಿದ್ದಾರೆ ಫೋರ್ಬ್ಸ್ ಪ್ರಕಾರ ಅದಾನಿ ಅವರ ಪ್ರಸ್ತುತ ನಿವ್ವಳ ಮೌಲ್ಯವು 52.8 ಬಿಲಿಯನ್ ಡಾಲರ್ ಇದೆ.