ನವ ದೆಹಲಿ: ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ಅವರು ( Adani Group) ಅಮೆರಿಕದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಹೋರಾಟ ನಡೆಸಲು ಅಲ್ಲಿನ ಕಾನೂನು ವಲಯದ ಸಂಸ್ಥೆಗಳಾದ ವಾಚ್‌ಟೆಲ್, ಲಿಪ್ಟೋನ್, ರೋಸೆನ್ &ಕಾಟ್ಜ್ ಅನ್ನು ನೇಮಿಸಿದೆ ಎಂದು ವರದಿಯಾಗಿದೆ. ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ವಿರುದ್ಧ ಅವ್ಯವಹಾರ, ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವ ವರದಿ ಪ್ರಕಟಿಸಿದ ಬಳಿಕ ಅದಾನಿ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತ ಉಂಟಾಗಿತ್ತು.
ಹಿಂಡೆನ್‌ಬರ್ಗ್ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆಸುತ್ತಿರುವುದಾಗಿ ಅದಾನಿ ಗ್ರೂಪ್ ಇತ್ತೀಚೆಗೆ ತಿಳಿಸಿತ್ತು. ಹಿಂಡೆನ್ ಬರ್ಗ್‌ನ ಆರೋಪಗಳನ್ನು ತಿರಸ್ಕರಿಸಿತ್ತು. ಆದರೆ ಪ್ರತಿಯಾಗಿ ಹಿಂಡೆನ್‌ಬರ್ಗ್, ಕಾನೂನು ಸಂಘರ್ಷಕ್ಕೂ ಸಿದ್ಧ ಎಂದು ಸವಾಲು ಹಾಕಿತ್ತು.
2022ರಲ್ಲಿ ಟ್ವಿಟರ್ ಕಂಪನಿಯು ವಾಚ್‌ಟೆಲ್ ಅನ್ನು ಎಲಾನ್ ಮಸ್ಕಲ್ ವಿರುದ್ಧ ಮೊಕದ್ದಮೆ ಹೂಡಲು ನೇಮಿಸಿತ್ತು. 44 ಶತಕೋಟಿ ಡಾಲರ್ ಮೌಲ್ಯದ ಖರೀದಿಯನ್ನು ಪೂರ್ಣಗೊಳಿಸಲು ಮಸ್ಕ್ ಮೇಲೆ ಒತ್ತಡ ಹೇರಿತ್ತು.