Site icon Vistara News

Adani | ಎಸಿಸಿ, ಅಂಬುಜಾ ಸಿಮೆಂಟ್‌ನ 96,800 ಕೋಟಿ ರೂ. ಷೇರುಗಳನ್ನು ಸಾಲಕ್ಕಾಗಿ ಅಡವಿಟ್ಟ ಅದಾನಿ

Hindenburg an unethical short-seller, profited from stock trading: Adani

Hindenburg an unethical short-seller, profited from stock trading: Adani

ನವ ದೆಹಲಿ: ಬಿಲಿಯನೇರ್‌ ಉದ್ಯಮಿ ಗೌತಮ್‌ ಅದಾನಿಯವರ ಸಮೂಹವು, ಎಸಿಸಿ ಮತ್ತು ಅಂಬುಜಾ ಸಿಮೆಂಟ್‌ನ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ, (Adani) ಈ ಎರಡೂ ಕಂಪನಿಗಳ 13 ಶತಕೋಟಿ ಡಾಲರ್‌ ( ೯೬,೮೦೦ ಕೋಟಿ ರೂ.) ಮೌಲ್ಯದ ಷೇರುಗಳನ್ನು ಸಾಲಕ್ಕಾಗಿ ಅಡಮಾನ ಇಟ್ಟಿದೆ.

ಗ್ರೀನ್‌ ಎನರ್ಜಿಯಿಂದ ಮಾಧ್ಯಮದ ತನಕ ನಾನಾ ವಲಯಗಳಲ್ಲಿ ಮಹತ್ತ್ವಾಕಾಂಕ್ಷೆಯ ಡೀಲ್‌ಗಳನ್ನು ಕುದುರಿಸುತ್ತಿರುವ ಅದಾನಿ ಸಮೂಹ, ಈ ನಿಟ್ಟಿನಲ್ಲಿ ಸಾಲದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿದೆ. ಇದೀಗ ಹೋಲ್ಸಿಮ್‌ನಿಂದ ಎಸಿಸಿ ಮತ್ತು ಅಂಬುಜಾವನ್ನು ಖರೀದಿಸಿದ ಕೆಲ ದಿನಗಳಲ್ಲಿಯೇ ಅನುಕ್ರಮವಾಗಿ 57% ಮತ್ತು 63% ಷೇರುಗಳನ್ನು ಅಡಮಾನ ಇಟ್ಟಿದೆ.

ಅಂಬುಜಾ ಮತ್ತು ಎಸಿಸಿ ಕಂಪನಿಯ ಸ್ವಾಧೀನದೊಂದಿಗೆ ಅದಾನಿ ಗ್ರೂಪ್‌, ಸಿಮೆಂಟ್‌ ಉತ್ಪಾದನೆ ವಲಯದಲ್ಲಿ ಪ್ರಾಬಲ್ಯ ಸಾಧಿಸಲು ನಿರ್ಧರಿಸಿದೆ. 2027ರ ವೇಳೆಗೆ ಸಿಮೆಂಟ್‌ ಉತ್ಪಾದನೆಯನ್ನು ಇಮ್ಮಡಿಗೊಳಿಸಲು ಅದಾನಿ ಗ್ರೂಪ್‌ ತೀರ್ಮಾನಿಸಿದೆ.

Exit mobile version