Site icon Vistara News

Adani Group : ಕರಾಯಿಕಲ್‌ ಬಂದರು ಸ್ವಾಧೀನ ಪೂರ್ಣಗೊಳಿಸಿದ ಅದಾನಿ ಪೋರ್ಟ್ಸ್

port

#image_title

ನವ ದೆಹಲಿ: ಅದಾನಿ ಪೋರ್ಟ್ಸ್‌ & ಸ್ಪೆಶಲ್‌ ಎಕನಾಮಿಕ್‌ ಝೋನ್‌ ಲಿಮಿಟೆಡ್‌ (Adani ports and special economic zone limited) ಶನಿವಾರ ಕರಾಯಿಕಲ್‌ ಪೋರ್ಟ್‌ ಪ್ರೈವೇಟ್‌ ಲಿಮಿಟೆಡ್‌ (Karaikal Port) ಅನ್ನು ಖರೀದಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಇದಕ್ಕೆ ಎನ್‌ಸಿಎಲ್‌ಟಿ ಅನುಮೋದಿಸಿದೆ. ಕರಾಯಿಕಲ್‌ ಬಂದರು ಪುದುಚೇರಿಯಲ್ಲಿದೆ. ಐದು ಸಕ್ರಿಯ ಬರ್ತ್‌, ರೈಲ್ವೆ ಮಾರ್ಗದ ಸಂಪರ್ಕ, ಒಟ್ಟು 600 ಹೆಕ್ಟೇರ್‌ ಜಾಗವನ್ನು ಒಳಗೊಂಡಿದೆ. ವಾರ್ಷಿಕ 21.5 ದಶಲಕ್ಷ ಟನ್‌ ( 2.15 ಕೋಟಿ ಟನ್)‌

ಅದಾನಿ ಪೋರ್ಟ್ಸ್‌ ಈ ಬಂದರನ್ನು 1,485 ಕೋಟಿ ರೂ.ಗೆ ಖರೀದಿಸಿದೆ. ಬಂದರಿನ ಮೂಲಸೌಕರ್ಯ ಅಭಿವೃದ್ಧಿಗೆ ಅದಾನಿ ಕಂಪನಿ 850 ಕೋಟಿ ರೂ.ಗಳನ್ನು ವೆಚ್ಚ ಮಾಡಲಿದೆ. 2009ರಲ್ಲಿ ಕರಾಯಿಕಲ್‌ ಪೋರ್ಟ್‌ ಅಸ್ತಿತ್ವಕ್ಕೆ ಬಂದಿತ್ತು. ಚೆನ್ನೈನಿಂದ ದಕ್ಷಿಣಕ್ಕೆ 300 ಕಿ.ಮೀ ದೂರದಲ್ಲಿ ಈ ಬಂದರು ಇದೆ. ಅದಾನಿ ಪೋರ್ಟ್ಸ್‌ ಭಾರತದ ಅತಿ ದೊಡ್ಡ ಖಾಸಗಿ ಬಂದರು ಕಂಪನಿಯಾಗಿದೆ.

ಕರಾಯಿಕಲ್‌ ಬಂದರು ವೈವಿಧ್ಯಮಯವಾದ ಸರಕು ಸಾಗಣೆಗೆ ಹೆಸರಾಗಿದೆ. ಕಲ್ಲಿದ್ದಲು, ಸಕ್ಕರೆ, ಸಿಮೆಂಟ್‌, ರಸಗೊಬ್ಬರ, ಕೃಷಿ ಉತ್ಪನ್ನಗಳನ್ನು ಈ ಬಂದರು ನಿರ್ವಹಿಸುತ್ತದೆ.

ಏರ್‌ ಪೋರ್ಟ್‌ ಖರೀದಿಗೆ ಸಿದ್ಧತೆ

Adani Group

ಅದಾನಿ ಸಮೂಹವು ದೇಶದಲ್ಲಿ ಮತ್ತಷ್ಟು ಏರ್‌ಪೋರ್ಟ್‌ಗಳನ್ನು ಖರೀದಿಸಲು ಸಿದ್ಧತೆ ನಡೆಸಿದೆ. (Adani Group) ಏರ್‌ಪೋರ್ಟ್‌ ನಿರ್ವಹಣೆಯ ಉದ್ದಿಮೆಯಲ್ಲಿ ಮುಂಚೂಣಿಯಲ್ಲಿ ಮುಂದುವರಿಯಲು ಮತ್ತಷ್ಟು ವಿಮಾನ ನಿಲ್ದಾಣಗಳನ್ನು ಹೊಂದಲು ಸಮೂಹ ಯತ್ನಿಸಲಿದೆ ಎಂದು ಅದಾನಿ ಏರ್‌ಪೋರ್ಟ್ಸ್‌ ಕಂಪನಿಯ ಸಿಇಒ ಅರುಣ್‌ ಬನ್ಸಾಲ್‌ ತಿಳಿಸಿದ್ದಾರೆ.

ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಭಾಗವಾಗಿ ಈ ಹಿಂದೆ ನಡೆದ ಪ್ರಕ್ರಿಯೆಯಲ್ಲಿ ಅದಾನಿ ಏರ್‌ಪೋರ್ಟ್ಸ್‌ 6 ವಿಮಾನ ನಿಲ್ದಾಣಗಳ ನಿರ್ವಹಣೆ ಗುತ್ತಿಗೆಯನ್ನು ತನ್ನದಾಗಿಸಿತ್ತು. ಮುಂದಿನ ಕೆಲವು ವರ್ಷಗಳಲ್ಲಿ ಒಂದು ಡಜನ್‌ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಉದ್ದೇಶಿಸಿದೆ.

ಅದಾನಿ ಸಮೂಹವು ನವಿ ಮುಂಬಯಿನಲ್ಲಿ 2,866 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸುತ್ತಿದೆ. ಇದು 2036 ವೇಳೆಗೆ 9 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ನಿರೀಕ್ಷೆ ಇದೆ. ದಿಲ್ಲಿಯಲ್ಲಿ ವಿಮಾನ ನಿಲ್ದಾಣದ ಸಾಮರ್ಥ್ಯ ವೃದ್ಧಿಸಲಿದೆ. ಗುಜರಾತ್‌ ಮತ್ತು ಆಂಧ್ರಪ್ರದೇಶದಲ್ಲಿ ಗ್ರೀನ್‌ ಫೀಲ್ಡ್‌ ಏರ್‌ಪೋರ್ಟ್‌ಗಳು ಅಸ್ತಿತ್ವಕ್ಕೆ ಬರುತ್ತಿವೆ. ಅದಾನಿ ಸಮೂಹದ ಏಳು ಏರ್‌ಪೋರ್ಟ್‌ಗಳು 92% ದೇಶೀಯ ಹಾಗೂ 133% ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಏರ್‌ಪೋರ್ಟ್‌ಗಳನ್ನು ನಿರ್ವಹಿಸುತ್ತವೆ. ಕೇಂದ್ರ ಸರ್ಕಾರ 2024ರ ವೇಳೆಗೆ 100 ಏರ್‌ ಪೋರ್ಟ್‌ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

Exit mobile version