ನವ ದೆಹಲಿ: ಅದಾನಿ ಪೋರ್ಟ್ಸ್ ಮಾರ್ಚ್‌ನಲ್ಲಿ 1,000 ಕೋಟಿ ರೂ. ಸಾಲವನ್ನು ಅವಧಿಗೆ ಮುನ್ನ ಮರು ಪಾವತಿಸಲು ನಿರ್ಧರಿಸಿದೆ ಎಂದು ಕಂಪನಿಯ ವಕ್ತಾರರು (Adani Group ) ತಿಳಿಸಿದ್ದಾರೆ. ಕಂಪನಿಯು ತನ್ನಲ್ಲಿ ಈಗಾಗಲೇ ಇರುವ ನಗದು ಮತ್ತು ಬಿಸಿನೆಸ್‌ನಿಂದ ಪಡೆದಿರುವ ಫಂಡ್‌ಗಳನ್ನು ಬಳಸಿ ಸಾಲ ಮರು ಪಾವತಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಅದಾನಿ ಪೋರ್ಟ್ಸ್ 2,000 ಕೋಟಿ ರೂ. ಬೆಲೆಬಾಳುವ ಕಮರ್ಶಿಯಲ್ ಪೇಪರ್‌ಗಳನ್ನು ಹೊಂದಿದ್ದು, ಅದು ಮಾರ್ಚ್‌ನಲ್ಲಿ ಮೆಚ್ಯೂರಿಟಿಯಾಗಲಿದೆ.
2022ರ ಡಿಸೆಂಬರ್ 31ಕ್ಕೆ ಅದಾನಿ ಪೋರ್ಟ್ಸ್ 6257 ಕೋಟಿ ರೂ. ನಗದನ್ನು ಹೊಂದಿತ್ತು. ಸೋಮವಾರ ಮೆಚ್ಯೂರ್ ಆಗುವ ಎಸ್‌ಬಿಐ ಮ್ಯೂಚುವಲ್ ಫಂಡ್ ಕಮರ್ಶಿಯಲ್ ಪೇಪರ್‌ಗಳಿಗೆ 1,500 ಕೋಟಿ ರೂ.ಗಳನ್ನು ನೀಡಿತ್ತು.
ಅಮೆರಿಕದ ಹಿಂಡೆನ್‌ಬರ್ಗ್ ಕಳೆದ ಜನವರಿ ೨೪ರಂದು ಅದಾನಿ ಗ್ರೂಪ್ ವಿರುದ್ಧ ಅವ್ಯವಹಾರಗಳ ಗಂಭೀರ ಆರೋಪಗಳನ್ನು ಮಾಡಿದ ಬಳಿಕ ಕಂಪನಿಯ ಷೇರು ದರ ಕುಸಿದಿತ್ತು. ಇದೀಗ ಸಾಲದ ಭಾಗವನ್ನು ಅವಧಿಗೆ ಮುನ್ನ ಮರು ಪಾವತಿಸುವ ಮೂಲಕ ಹೂಡಿಕೆದಾರರ ವಿಶ್ವಾಸ ವೃದ್ಧಿಗೆ ಅದಾನಿ ಗ್ರೂಪ್ ಯತ್ನಿಸಿದೆ.