ನವ ದೆಹಲಿ: ಜಗತ್ತಿನ ಮೂರನೇ ಅತಿ ದೊಡ್ಡ ಶ್ರೀಮಂತ ಎನ್ನಿಸಿದ್ದ ಉದ್ಯಮಿ ಗೌತಮ್ ಅದಾನಿ ಅವರ (Gautam Adani) ರ‍್ಯಾಂಕ್ ಈಗ 30ಕ್ಕೆ ಕುಸಿದಿದೆ. ಅದಾನಿಯವರ ವೈಯಕ್ತಿಕ ಸಂಪತ್ತಿನ ಮೌಲ್ಯದಲ್ಲಿ ಈಗ 6.56 ಲಕ್ಷ ಕೋಟಿ ರೂ. ಕರಗಿದೆ. ಇದರ ಪರಿಣಾಮ ಬಿಲಿಯನೇರ್ ಇಂಡೆಕ್ಸ್‌ನಲ್ಲಿ ಇಳಿದಿದ್ದಾರೆ. (Adani stocks) ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್, ಅದಾನಿ ಗ್ರೂಪ್ ವಿರುದ್ಧ ವರದಿ ಪ್ರಕಟಿಸಿದ ಬಳಿಕ ಸಮೂಹದ ಕಂಪನಿಗಳ ಷೇರು ದರ ಕುಸಿದಿತ್ತು.
ಅದಾನಿ ಸಮೂಹ ಸೆಪ್ಟೆಂಬರ್ 30ರ ವೇಳೆಗೆ 2.26 ಲಕ್ಷ ಕೋಟಿ ರೂ. ಸಾಲ ಹೊಂದಿದ್ದು, 31,646 ಕೋಟಿ ರೂ. ನಗದನ್ನು ಒಳಗೊಂಡಿತ್ತು. 2023 ಜನವರಿ ಮತ್ತು 2024ರ ಮಾರ್ಚ್ ಅವಧಿಯಲ್ಲಿ 17,166 ಕೋಟಿ ರೂ. ಸಾಲ ಮರುಪಾವತಿಸಬೇಕಾಗಿದೆ.
ಜನವರಿ ೨೪ರಂದು ಹಿಂಡೆನ್‌ಬರ್ಗ್ ವರದಿ ಪ್ರಕಟವಾಗಿತ್ತು. ಬಳಿಕ ಅದಾನಿ ಸಮೂಹದ 10 ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯದಲ್ಲಿ 12.06 ಲಕ್ಷ ಕೋಟಿ ರೂ. ನಷ್ಟವಾಗಿತ್ತು. ಅಂದರೆ ಟಿಸಿಎಸ್‌ನ ಮಾರುಕಟ್ಟೆ ಮೌಲ್ಯಕ್ಕೆ ಸಮವಾಗುವಷ್ಟು. ಜನವರಿ 24 ರ ಬಳಿಕ ಅದಾನಿ ಸಮೂಹದ ಕಂಪನಿಗಳ ಬಂಡವಾಳ ಷೇರು ಮೌಲ್ಯ ಕುಸಿತ ಇಂತಿದೆ.
ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್: 80.68% ನಷ್ಟ
ಅದಾನಿ ಗ್ರೀನ್ ಎನರ್ಜಿ: 74.62%
ಅದಾನಿ ಟ್ರಾನ್ಸ್‌ಮಿಶನ್: 74.21%
ಅದಾನಿ ಎಂಟರ್‌ಪ್ರೈಸಸ್: 62%