ನವ ದೆಹಲಿ: ಎನ್‌ಡಿಟಿವಿಯ ಷೇರುಗಳನ್ನು ಅದಾನಿ ಗ್ರೂಪ್‌ನ ವಿಸಿಪಿಎಲ್‌ಗೆ ವರ್ಗಾಯಿಸಲು ಆದಾಯ ತೆರಿಗೆ ಇಲಾಖೆಯ ಅನುಮತಿ ಅಗತ್ಯ ಎಂಬ ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆಯಾದ ಆರ್‌ಆರ್‌ಪಿಆರ್ ವಾದವನ್ನು ಅದಾನಿ ಗ್ರೂಪ್ (Adani) ತಳ್ಳಿ ಹಾಕಿದೆ.
ಎನ್‌ಡಿಟಿವಿಯ ಷೇರುಗಳನ್ನು ತಾತ್ಕಾಲಿಕವಾಗಿ ಐಟಿ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವುದರಿಂದ, ಅವುಗಳ ವರ್ಗಾವಣೆಗೆ ಆದಾಯ ತೆರಿಗೆ ಇಲಾಖೆಯ ಅನುಮತಿ ಅಗತ್ಯ ಎಂದು ಆರ್‌ಆರ್‌ಪಿಆರ್ ವಾದಿಸಿದೆ. ಆದರೆ ಈ ವಾದ ” ದಿಕ್ಕು ತಪ್ಪಿಸುವಂಥದ್ದು ಹಾಗೂ ಷೇರು ವರ್ಗಾವಣೆಯನ್ನು ವಿಳಂಬಗೊಳಿಸುವ ದುರುದ್ದೇಶವನ್ನು ಒಳಗೊಂಡಿದೆʼʼ ಎಂದು ಅದಾನಿ ಗ್ರೂಪ್ ತಳ್ಳಿ ಹಾಕಿದೆ.
ಐಟಿ ಇಲಾಖೆಯು ೨೦೧೮ರಲ್ಲಿ ಎನ್‌ಡಿಟಿವಿಯ ಷೇರುಗಳನ್ನು ಮುಟ್ಟುಗೋಲು ಹಾಕಿಕೊಂಡಿರುವ ಬಗ್ಗೆ ಅದಾನಿ ಗ್ರೂಪ್‌ನ ವಿಶ್ವಪ್ರಧಾನ್ ಕಮರ್ಶಿಯಲ್ ಪ್ರೈವೇಟ್ ಲಿಮಿಟೆಡ್‌ಗೆ (ವಿಸಿಪಿಎಲ್) ತಿಳಿಸಿರುವುದಾಗಿ ಎನ್‌ಡಿಟಿವಿ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದೆ. ಆದರೆ ಈ ಪತ್ರವನ್ನು ಹಿಂತೆಗೆದುಕೊಳ್ಳುವಂತೆ ಅದಾನಿ ಗ್ರೂಪ್, ಆರ್‌ಆರ್‌ಪಿಆರ್ ಹೋಲ್ಡಿಂಗ್‌ಗೆ ತಿಳಿಸಿದೆ.
ಇದನ್ನೂ ಓದಿ: NDTV | ಅಕ್ಟೋಬರ್ 17ಕ್ಕೆ ಎನ್‌ಡಿಟಿವಿಯ ಹೆಚ್ಚುವರಿ 26% ಷೇರು ಖರೀದಿಗೆ ಅದಾನಿ ಆಫರ್