ಮುಂಬಯಿ: ನ್ಯೂಯಾರ್ಕ್ ಮೂಲದ ಹಿಂಡೆನ್‌ಬರ್ಗ್ ವರದಿಯಿಂದ ಅದಾನಿ ಗ್ರೂಪ್‌ಗೆ 20,000 ಕೋಟಿ ರೂ.ಗಳ ಮೆಗಾ ಎಫ್‌ಪಿಒದಲ್ಲಿ (ಮುಂದುವರಿದ ಷೇರು ಬಿಡುಗಡೆ) ಭಾರಿ ಹಿನ್ನಡೆಯಾಗಿದೆ. ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒದ ಮೊದಲ ದಿನವಾದ ಶುಕ್ರವಾರ ಕೇವಲ 1% ಷೇರುಗಳು ಮಾರಾಟವಾಗಿದೆ. (Adani stocks) ಅದಾನಿ ಎಂಟರ್‌ಪ್ರೈಸಸ್‌ನ ಎಫ್‌ಪಿಒದಲ್ಲಿ (Follow on public offer) 4,55,06,791 ಷೇರುಗಳಿಗೆ ಪ್ರತಿಯಾಗಿ 4,70,160 ಬಿಡ್‌ಗಳು ಮೊದಲ ದಿನ ಬಂದಿತ್ತು.
ಅರ್ಹ ಸಾಂಸ್ಥಿಕ ಹೂಡಿಕೆದಾರರಿಂದ (Qualified institutional investors) ಪ್ರತಿಸ್ಪಂದನೆ ದುರ್ಬಲವಾಗಿತ್ತು. ಈ ಕೆಟಗರಿಯಲ್ಲಿ 1,28,21,336 ಷೇರುಗಳಿಗೆ ಪ್ರತಿಯಾಗಿ ಕೇವಲ 2,656 ಷೇರುಗಳಿಗೆ ಬಿಡ್ ಸಲ್ಲಿಕೆಯಾಗಿದೆ. ಎಫ್‌ಪಿಒಗೆ ಮುನ್ನ 30 ಸಾಂಸ್ಥಿಕ ಹೂಡಿಕೆದಾರರಿಂದ 6,000 ಕೋಟಿ ರೂ. ಹೂಡಿಕೆಯನ್ನು ಸಂಗ್ರಹಿಸಿತ್ತು. ಎಫ್‌ಪಿಒ ದರ ಶ್ರೇಣಿ ಪ್ರತಿ ಷೇರಿಗೆ 3,112-3,276 ರೂ.ಗಳಾಗಿದೆ.