Site icon Vistara News

Adani stocks : ಅದಾನಿ ಷೇರುದಾರರಿಗೆ ದಿಢೀರ್ 50,000 ಕೋಟಿ ರೂ. ನಷ್ಟ‌, ಕಾರಣವೇನು?

Adani

ಮುಂಬಯಿ: ಅದಾನಿ ಸಮೂಹದ ಷೇರುಗಳ ದರ ಶುಕ್ರವಾರ ಒಂದೇ ದಿನ 10% ಕುಸಿತಕ್ಕೀಡಾಯಿತು. ( Adani stocks) ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ 52,000 ಕೋಟಿ ರೂ. ನಷ್ಟವಾಯಿತು. ಅಮೆರಿಕದಲ್ಲಿ ಆಡಳಿತಾತ್ಮಕ ನಿಯಂತ್ರಕ ಸಂಸ್ಥೆಗಳು ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳಿಗೆ ಸಂಬಂಧಿಸಿ ಹೂಡಿಕೆದಾರರಿಂದ ವಿವರಣೆಗಳನ್ನು ಪಡೆದು ಪರಿಶೀಲಿಸಲಿವೆ ಎಂಬ ವರದಿಗಳ ಬೆನ್ನಲ್ಲೇ ಷೇರು ಪೇಟೆಯಲ್ಲಿ ಅದಾನಿ ಕಂಪನಿಗಳ ಷೇರು ದರ ಕುಸಿದಿದೆ.

ಅದಾನಿ ಎಂಟರ್‌ಪ್ರೈಸಸ್‌ ಷೇರು ದರದಲ್ಲಿ 10% ಇಳಿಕೆಯಾಯಿತು. (2,162 ರೂ.) ಅದಾನಿ ಪೋರ್ಟ್ಸ್‌, ಅದಾನಿ ಪವರ್‌, ಅದಾನಿ ಟ್ರಾನ್ಸ್‌ಮಿಶನ್‌ ಷೇರು ದರದಲ್ಲಿ 5% ಇಳಿಯಿತು. ಅದಾನಿ ಟೋಟಲ್‌ ಗ್ಯಾಸ್‌, ಅದಾನಿ ಗ್ರೀನ್‌ ಎನರ್ಜಿ, ಅದಾನಿ ವಿಲ್ಮರ್‌ ಷೇರು ದರ 3% ಕುಸಿಯಿತು.

ಆಗಿದ್ದೇನು? ಅಮೆರಿಕದಲ್ಲಿ ಆಡಳಿತಾತ್ಮಕ ಮತ್ತು ಷೇರು ಮಾರುಕಟ್ಟೆ ನಿಯಂತ್ರಕಗಳು ಅದಾನಿ ಗ್ರೂಪ್‌ನಲ್ಲಿ ಭಾರಿ ಮಟ್ಟದಲ್ಲಿ ಹೂಡಿಕೆ ಮಾಡಿರುವವರಿಂದ ಹೆಚ್ಚಿನ ವಿವರಣೆಗಳನ್ನು ನಿರೀಕ್ಷಿಸಿದೆ ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ. ಈ ತನಿಖೆಯ ಸುದ್ದಿ ಷೇರು ಮಾರುಕಟ್ಟೆಯಲ್ಲಿ ಅದಾನಿ ಷೇರುಗಳ ಕುಸಿತಕ್ಕೆ ಕಾರಣವಾಯಿತು. ಕಳೆದ ಜನವರಿ 24ರಂದು ಅಮೆರಿಕದ ಶಾರ್ಟ್‌ ಸೆಲ್ಲರ್‌ ಹಿಂಡೆನ್‌ ಬರ್ಗ್‌, ಅದಾನಿ ಗ್ರೂಪ್‌ ವಿರುದ್ಧ ಸ್ಫೋಟಕ ವರದಿಯನ್ನು ಪ್ರಕಟಿಸಿತ್ತು.

ಅಮೆರಿಕದ ಸೆಕ್ಯುರಿಟೀಸ್‌ ಆಂಡ್‌ ಎಕ್ಸ್‌ಚೇಂಜ್‌ ಕಮಿಶನ್‌ ಮತ್ತು ಬ್ರೂಕ್ಲೀನ್‌ನಲ್ಲಿನ ಅಟಾರ್ನಿಯವರ ಕಚೇರಿ ಕೂಡ ಅದಾನಿ ಗ್ರೂಪ್‌ ಷೇರುಗಳಲ್ಲಿ ಹೂಡಿಕೆ ಮಾಡಿರುವವರಿಂದ ಮಾಹಿತಿಯನ್ನು ಕೋರಿದೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸದಲ್ಲಿರುವ ಸಂದರ್ಭ ಉದ್ಯಮಿಗಳ ನಿಯೋಗದಲ್ಲಿ ಗೌತಮ್‌ ಅದಾನಿಯವರೂ ಇದ್ದಾರೆ.

ಇದನ್ನೂ ಓದಿ :Adani Group : 22,000 ಕೋಟಿ ರೂ. ಸಾಲ ತೀರಿಸಿದ ಅದಾನಿ ಗ್ರೂಪ್‌, ಷೇರು ದರ ಜಿಗಿತ

Exit mobile version