ನವ ದೆಹಲಿ: ಅದಾನಿ ಗ್ರೂಪ್ ಕಂಪನಿಗಳ ಷೇರು ದರದಲ್ಲಿ ಏರಿಕೆ ದಾಖಲಾಗಿದೆ. ಸಮೂಹದ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗಳ ಗಡಿಯನ್ನು ದಾಟಿದೆ. ಸುಪ್ರೀಂಕೋರ್ಟ್ ನಿಯೋಜಿತ ತಜ್ಞರ ಸಮಿತಿಯು ಹಿಂಡೆನ್ ಬರ್ಗ್ ಕೇಸ್‌ನಲ್ಲಿ ಅದಾನಿ ಗ್ರೂಪ್‌ಗೆ ಕ್ಲೀನ್ ಚಿಟ್ ನೀಡಿದೆ. ಇದಾದ ಬಳಿಕ ಷೇರು ದರ ಏರುಗತಿಯಲ್ಲಿ ಇರುವುದನ್ನು ಗಮನಿಸಬಹುದು.
ಅದಾನಿ ಕಂಪನಿಗಳ ಷೇರು ದರದಲ್ಲಿ 15% ಹೆಚ್ಚಳವಾಗಿದೆ. ಶುಕ್ರವಾರ ಅದಾನಿ ಕಂಪನಿಗಳ ಮಾರುಕಟ್ಟೆ ಮೌಲ್ಯ 10 ಲಕ್ಷ ಕೋಟಿ ರೂ.ಗೆ ವೃದ್ಧಿಸಿತು. ಅದಾನಿ ಎಂಟರ್‌ಪ್ರೈಸಸ್ ಷೇರು ದರ 18%. ಅದಾನಿ ವಿಲ್ಮರ್ 10%, ಅದಾನಿ ಪೋರ್ಟ್ 8, ಅಂಬುಜಾ ಸಿಮೆಂಟ್ ( 6%) ಷೇರುಗಳ ದರ ಚೇತರಿಸಿತು.
ಅದಾನಿ ಗ್ರೀನ್ ಎನರ್ಜಿ, ಅದಾನಿ ಪವರ್, ಟೋಟಲ್ ಗ್ಯಾಸ್, ಅದಾನಿ ಟ್ರಾನ್ಸ್‌ಮಿಶನ್ ಷೇರು ದರದಲ್ಲಿ 5% ಏರಿಕೆ ದಾಖಲಾಯಿತು.
ಅದಾನಿ-ಹಿಂಡೆನ್‌ಬರ್ಗ್ ವಿವಾದದ ತನಿಖಾ ವರದಿಯನ್ನು ಆಗಸ್ಟ್ 14ರೊಳಗೆ ನೀಡುವಂತೆ ಸುಪ್ರೀಂಕೋರ್ಟ್, ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಗೆ (SEBI) ಸೂಚಿಸಿದೆ. (Adani Group) ಹೆಚ್ಚುವರಿಯಾಗಿ ಮೂರು ತಿಂಗಳ ಕಾಲಾವಕಾಶವನ್ನು ಕೊಟ್ಟಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಪ್ರಕರಣದ ಬಗ್ಗೆ ಪರಿಷ್ಕೃತ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಸೆಬಿಗೆ ತಿಳಿಸಿದೆ.
ಇದನ್ನೂ ಓದಿ: Adani Group : ಅದಾನಿ-ಹಿಂಡೆನ್‌ಬರ್ಗ್ ತನಿಖಾ ವರದಿಯನ್ನು ಆ.14ರೊಳಗೆ ಸಲ್ಲಿಸಲು ಸೆಬಿಗೆ ಸುಪ್ರೀಂಕೋರ್ಟ್ ಸೂಚನೆ