Site icon Vistara News

Adani takeover NDTV| ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್‌ ರಾಯ್‌, ಪತ್ನಿ ರಾಧಿಕಾ ರಾಯ್‌ ರಾಜೀನಾಮೆ

ndtv

ನವ ದೆಹಲಿ: ಎನ್‌ಡಿಟಿವಿ ವಾಹಿನಿಯ ಸಂಸ್ಥಾಪಕರಾದ ಪ್ರಣಯ್‌ ರಾಯ್‌ ಮತ್ತು ಪತ್ನಿ ರಾಧಿಕಾ ರಾಯ್‌ ಅವರು ಚಾನೆಲ್‌ನ ಪ್ರವರ್ತಕ ಸಂಸ್ಥೆ ಆರ್‌ಆರ್‌ಪಿಆರ್‌ ಹೋಲ್ಡಿಂಗ್ಸ್‌ನ ನಿರ್ದೇಶಕರುಗಳ (Adani takeover NDTV) ಮಂಡಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಸುದೀಪ್ತಾ ಭಟ್ಟಾಚಾರ್ಯ, ಸಂಜಯ್‌ ಪುಗಾಲಿಯಾ ಮತ್ತು ಸೆಂಥಿಲ್‌ ಸಿನ್ನಯ್ಯ ಚೆಂಗಾಲ್ವರಾಯನ್‌ ಅವರು ನೂತನ ನಿರ್ದೇಶಕರುಗಳಾಗಿ ಮಂಡಳಿಗೆ ಸೇರಿದ್ದಾರೆ ಎಂದು ಆರ್‌ಆರ್‌ ಪಿಆರ್‌ ಹೋಲ್ಡಿಂಗ್‌, ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.

ಅದಾನಿ ಗ್ರೂಪ್‌ನ ಅಧೀನ ಸಂಸ್ಥೆಯು ಎನ್‌ಡಿಟಿವಿಯ ಷೇರುಗಳನ್ನು ಖರೀದಿಸಿದೆ. ಇದರೊಂದಿಗೆ ಎನ್‌ಡಿಟಿವಿಯ ಮಾಲಿಕತ್ವ ಅದಾನಿ ಸಮೂಹದ ತೆಕ್ಕೆಗೆ ಬರಲಿದೆ. ಈ ನಿಟ್ಟಿನಲ್ಲಿ ಎನ್‌ಡಿಟಿವಿಯ ಹೆಚ್ಚುವರಿ 26% ಷೇರುಗಳನ್ನು ಅದಾನಿ ಗ್ರೂಪ್‌ ಮೈನಾರಿಟಿ ಷೇರುದಾರರಿಂದ ಖರೀದಿಸುತ್ತಿದೆ. ಈ ಕುರಿತ ಓಪನ್‌ ಆಫರ್‌ ಡಿಸೆಂಬರ್‌ 5ಕ್ಕೆ ಮುಕ್ತಾಯವಾಗಲಿದೆ. ಅದಾನಿ ಸಮೂಹವು ಕಳೆದ ಆಗಸ್ಟ್‌ನಲ್ಲಿ ಪರೋಕ್ಷವಾಗಿ 29.18% ಷೇರುಗಳನ್ನು ಖರೀದಿಸಿತ್ತು.

ಅದಾನಿ ಗ್ರೂಪ್‌ ಎನ್‌ಡಿಟಿವಿಯನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಚಾನೆಲ್‌ನ ಷೇರು ದರದಲ್ಲಿ ಈ ವರ್ಷ 250% ಏರಿಕೆ ಉಂಟಾಗಿದೆ.

ಇದನ್ನೂ ಓದಿ: NDTV | ಎನ್‌ಡಿಟಿವಿ ಖರೀದಿಸಲು ಗೌತಮ್‌ ಅದಾನಿಗೆ ಸೆಬಿ ಒಪ್ಪಿಗೆ, ಹಾದಿ ಸುಗಮ

Exit mobile version