ನವ ದೆಹಲಿ: ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯ ಹೊಸ ಮಾಲೀಕರಾಗಿರುವ ಅದಾನಿ ಗ್ರೂಪ್, ಇವೆರಡೂ ಕಂಪನಿಗಳ ಒಟ್ಟು ಉತ್ಪಾದನೆಯನ್ನು 2030ರೊಳಗೆ ಇಮ್ಮಡಿಗೊಳಿಸಲು (Adani) ನಿರ್ಧರಿಸಿದೆ. ಈಗ ಇವೆರಡೂ ಕಂಪನಿಗಳ ಉತ್ಪಾದನೆ ವಾರ್ಷಿಕ 7 ಕೋಟಿ ಟನ್.
ವಾರ್ಷಿಕ ಉತ್ಪಾದನೆಯನ್ನು 14 ಕೋಟಿ ಟನ್ನುಗಳಿಗೆ ಏರಿಸಲು ಹಾಗೂ ಅಲ್ಟ್ರಾ ಟೆಕ್ ಸಿಮೆಂಟ್‌ನ ಉತ್ಪಾದನೆಯ ಮಟ್ಟದ ಸನಿಹಕ್ಕೆ ತರಲು ಅದಾನಿ ಗ್ರೂಪ್ ನಿರ್ಧರಿಸಿದೆ.
ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯ ಸ್ವಾಧೀನ ಪ್ರಕ್ರಿಯೆ ಪೂರ್ಣಘೋಂಡ ಬಳಿಕ ಸೋಮವಾರ ಮಾತನಾಡಿದ ಗೌತಮ್ ಅದಾನಿ, ಈ ವಿಷಯ ತಿಳಿಸಿದರು.
ಅದಾನಿ ಗ್ರೂಪ್ 20,000 ಕೋಟಿ ರೂ.ಗಳನ್ನು ಈ ಎರಡೂ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತಿದೆ. ಅಂಬುಜಾ ಸಿಮೆಂಟ್ ಷೇರು ದರ ಸೋಮವಾರ ಷೇರು ಪೇಟೆಯಲ್ಲಿ ಏರಿಕೆ ದಾಖಲಿಸಿತ್ತು.