Site icon Vistara News

Price rise | ಮಾರುಕಟ್ಟೆಯಲ್ಲಿ ಗೋಧಿಯ ಬಳಿಕ ಅಕ್ಕಿಯ ದರ 6.31% ಏರಿಕೆ

rice

ನವ ದೆಹಲಿ: ಗೋಧಿಯ ರಿಟೇಲ್‌ ದರ ಏರಿಕೆಯ ಬಳಿಕ ಇದೀಗ ಅಕ್ಕಿಯ ದರದಲ್ಲಿಯೂ ೬.೩೧% ದರ ಏರಿಕೆ (Price rise) ಉಂಟಾಗಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಅಕ್ಕಿಯ ದರದಲ್ಲಿ ೬.೩೧% ಹೆಚ್ಚಳವಾಗಿದ್ದು, ಪ್ರತಿ ಕೆ.ಜಿಗೆ ೩೭.೭ ರೂ.ಗೆ ಏರಿಕೆಯಾಗಿದೆ. ಅಖಿಲ ಭಾರತ ಮಟ್ಟದ ಸರಾಸರಿ ದರ ೨೨% ಏರಿಕೆಯಾಗಿದ್ದು, ೩೧.೦೪ ರೂ.ಗೆ ವೃದ್ಧಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೨೫.೪೧ ರೂ. ಇತ್ತು.

ಗೋಧಿ ಹಿಟ್ಟಿನ ಸರಾಸರಿ ರಿಟೇಲ್‌ ದರ ಪ್ರತಿ ಕೆ.ಜಿಗೆ ೧೭% ಏರಿಕೆಯಾಗಿದ್ದು, ೩೫.೧೭ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೩೦.೦೪ ರೂ.ಗೆ ಏರಿಕೆಯಾಗಿದೆ. ಭತ್ತದ ಬಿತ್ತನೆಯಲ್ಲಿ ಕಳೆದ ವಾರದ ತನಕ ೮.೨೫% ಇಳಿಕೆಯಾಗಿದೆ. ೨೦೨೨-೨೩ರಲ್ಲಿ ಅಕ್ಕಿಯ ಉತ್ಪಾದನೆ ೧೧.೨ ಕೋಟಿ ಟನ್‌ಗಳ ಗುರಿಗಿಂತ ಕಡಿಮೆ ಮಟ್ಟಕ್ಕಿಳಿಯುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ೩೯೬ ಲಕ್ಷ ಟನ್‌ ಅಕ್ಕಿ ದಾಸ್ತಾನು ಹೊಂದಿರುವುದರಿಂದ ಇದುವರೆಗೆ ಗೋಧಿಯ ರೀತಿಯಲ್ಲಿ ಅಕ್ಕಿಯ ದರ ಏರಿಕೆಯಾಗಿಲ್ಲ.

Exit mobile version