Site icon Vistara News

Air India | ಅಮೆರಿಕ-ಬೆಂಗಳೂರು ನಡುವೆ ಡಿಸೆಂಬರ್‌ 2ರಿಂದ ಏರ್‌ ಇಂಡಿಯಾ ನಾನ್‌ಸ್ಟಾಪ್‌ ಹಾರಾಟ

air india

ಬೆಂಗಳೂರು: ಏರ್‌ ಇಂಡಿಯಾ (Air India ) ಡಿಸೆಂಬರ್‌ 2ರಿಂದ ಅಮೆರಿಕ ಮತ್ತು ಬೆಂಗಳೂರು ನಡುವೆ ನಾನ್‌ಸ್ಟಾಪ್‌ ವಿಮಾನ ಹಾರಾಟವನ್ನು ಪುನರಾರಂಭಿಸಲಿದೆ. ಇದು ಏರ್‌ ಇಂಡಿಯಾದ ಸುದೀರ್ಘ ಹಾರಾಟದ ಮಾರ್ಗವಾಗಲಿದ್ದು, 14,000 ಕಿ.ಮೀ ದೂರವನ್ನು ಕ್ರಮಿಸಲಿದೆ.

ಬೆಂಗಳೂರು-ಸ್ಯಾನ್‌ ಫ್ರಾನ್ಸಿಸ್ಕೊ ನಡುವೆ ಎಂಟು ತಿಂಗಳಿನ ಬ್ರೇಕ್‌ ಬಳಿಕ ಈ ವಿಮಾನ ಹಾರಾಟ ಶುರುವಾಗಲಿದೆ. ಕೋವಿಡ್-‌19 ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಹಿಂದೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.

ವಾರಕ್ಕೆ ಮೂರು ಸಲ ವಿಮಾನ ಹಾರಾಟ ನಡೆಸಲಿದೆ. ಬುಧವಾರ, ಶುಕ್ರವಾರ, ಭಾನುವಾರ ಈ ಮಾರ್ಗದಲ್ಲಿ 238 ಸೀಟುಗಳ ಬೋಯಿಂಗ್‌ 777-200 ಎಲ್‌ಆರ್‌ ವಿಮಾನ ಹಾರಾಟ ನಡೆಸಲಿದೆ.

Exit mobile version