Site icon Vistara News

Air India | ಏರ್‌ ಇಂಡಿಯಾ ರೂಪಾಂತರಕ್ಕೆ ವಿಹಾನ್‌ ಎಐ ಪ್ಲಾನ್‌, ಟಾಟಾ ಯೋಜನೆಯಲ್ಲಿ ಏನಿದೆ?

air india alcohol policy

ನವ ದೆಹಲಿ: ಟಾಟಾ ಸಮೂಹವು ಏರ್‌ ಇಂಡಿಯಾದ (Air India) ನವೀಕರಣಕ್ಕಾಗಿ ವಿಹಾನ್‌ ಎಐ ಎಂಬ ಹೊಸ ಯೋಜನೆಯನ್ನು ಅನಾವರಣಗೊಳಿಸಿದೆ. ಏರ್ ಇಂಡಿಯಾವನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ ವಿಶ್ವದರ್ಜೆಯ ಏರ್‌ಲೈನ್‌ ಆಗಿಸಲು ಅಗತ್ಯ ಕ್ರಮಗಳನ್ನು ಈ ಯೋಜನೆಯ ಅಡಿಯಲ್ಲಿ ಕೈಗೊಳ್ಳಲು ಟಾಟಾ ಗ್ರೂಪ್‌ ಸಿದ್ಧವಾಗಿದೆ.

ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸುವುದು, ಏರ್‌ಲೈನ್‌ನ ನೆಟ್‌ ವರ್ಕ್‌ ಅನ್ನು ಬಲಪಡಿಸುವುದು, ಉದ್ಯಮ ವಲಯದಲ್ಲಿನ ಪ್ರತಿಭಾವಂತರ ತಂಡವನ್ನು ಸನ್ನದ್ಧಗೊಳಿಸುವುದು, ವಾಣಿಜ್ಯ ದೃಷ್ಟಿಯಿಂದ ದಕ್ಷತೆಯನ್ನು ಹೆಚ್ಚಿಸುವುದು ವಿಹಾನ್‌ ಎಐ ಯೋಜನೆಯ ಉದ್ದೇಶಗಳಾಗಿದೆ. ವಿಹಾನ್‌ ಎಂಬುದು ಸಂಸ್ಕೃತ ಪದವಾಗಿದ್ದು, ಹೊಸ ಶಕೆ ಎಂಬ ಅರ್ಥವನ್ನು ನೀಡುತ್ತದೆ.

ನೆಟ್‌ವರ್ಕ್‌ ವಿಸ್ತರಣೆ ಹಾಗೂ ವಿಮಾನಗಳ ಸಂಖ್ಯೆ ಹೆಚ್ಚಳಕ್ಕೂ ಏರ್‌ ಇಂಡಿಯಾದ ವಿಹಾನ್‌ ಎಐ ಯೋಜನೆ ಆದ್ಯತೆ ನೀಡಿದೆ. ತಂತ್ರಜ್ಞಾನದ ಬಳಕೆಯನ್ನೂ ವ್ಯಾಪಕಗೊಳಿಸಲಿದೆ. ಮುಂದಿನ ಐದು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ 30% ಪಾಲನ್ನು ಗಳಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಏರ್‌ಇಂಡಿಯಾದ ಸಿಇಒ ಕ್ಯಾಂಬೆಲ್‌ ವಿಲ್ಸನ್‌ ಮತ್ತು ಇತರ ಹಿರಿಯ ಅಧಿಕಾರಿಗಳು ವಿಹಾನ್‌ ಎಐ ಅನ್ನು ಅನಾವರಣಗೊಳಿಸಿದ್ದಾರೆ. ಈಗಾಗಲೇ ಏರ್‌ ಇಂಡಿಯಾಗೆ ಕಾಯಕಲ್ಪ ನೀಡುವ ಕೆಲಸ ಆರಂಭವಾಗಿದೆ. ಯೋಜನೆಯೊಂದಿಗೆ ಮತ್ತಷ್ಟು ವ್ಯಾಪಕವಾಗಲಿದೆ ಎಂದು ವಿಲ್ಸನ್‌ ತಿಳಿಸಿದ್ದಾರೆ.

ಇದನ್ನೂ ಓದಿ: Vistara-Air India | ವಿಸ್ತಾರ-ಏರ್‌ ಇಂಡಿಯಾ ವಿಲೀನ? ಶುರುವಾಗಿದೆ ಮಾತುಕತೆ

Exit mobile version