ನವದೆಹಲಿ: ಏರ್ ಇಂಡಿಯಾದ ತೆಕ್ಕೆಗೆ ಮುಂದಿನ 5 ವರ್ಷಗಳಲ್ಲಿ 200 ವಿಮಾನಗಳು ಸೇರ್ಪಡೆಯಾಗಲಿದೆ.
” ಇನ್ನು ಹೆಚ್ಚು ಸಮಯವಿಲ್ಲ, ಏರ್ ಇಂಡಿಯಾ ಅತ್ಯಂತ ತ್ವರಿತವಾಗಿ ವಿಸ್ತರಿಸಲಿದೆ. ಈ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳಲ್ಲಿ ಇನ್ನೂರಕ್ಕೂ ಹೆಚ್ಚು ವಿಮಾನಗಳು ಸೇರ್ಪಡೆಯಾಗಲಿದೆʼʼ ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ.
ಈ ಸಂಬಂಧ ಏರ್ ಇಂಡಿಯಾ, ಏರ್‌ಬಸ್ ಮತ್ತು ಬೋಯಿಂಗ್ ಜತೆ ಮಾತುಕತೆ ನಡೆಸಿದೆ. ಏರ್ ಇಂಡಿಯಾ ಖರೀದಿಸಲಿರುವ ವಿಮಾನಗಳಲ್ಲಿ ೭೦% ವಿಮಾನಗಳು narro-bodied planes ಆಗಿದ್ದರೆ, 30% ವಿಮಾನಗಳು wide-bodied plans ಆಗಿವೆ. ಬೋಯಿಂಗ್ ವಿಮಾನಗಳ ಖರೀದಿಯಲ್ಲಿ ವಿಳಂಬ ಆಗುವ ಸಾಧ್ಯತೆ ಇದೆ. ಏರ್‌ಬಸ್ ಜತೆ ವಿಮಾನ ಖರೀದಿಗೆ ಕಳೆದ ಆರು ತಿಂಗಳುಗಳಿಂದ ಮಾತುಕತೆ ನಡೆಯುತ್ತಿದೆ. ಈ ಒಪ್ಪಂದಗಳು ನಡೆದರೆ, ವೈಮಾನಿಕ ಇತಿಹಾಸದಲ್ಲೇ ಅತಿ ದೊಡ್ಡ ವಿಮಾನ ಖರೀದಿ ಒಪ್ಪಂದಗಳಲ್ಲಿ ಒಂದೆನ್ನಿಸಲಿವೆ.