ನವ ದೆಹಲಿ: ವಿಮಾನಗಳ ಏರ್ ಟಿಕೆಟ್‌ಗಳ ದರ ನಿಗದಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಕೋವಿಡ್ ಬಿಕ್ಕಟ್ಟಿನ ಸಂದರ್ಭ ವಿಧಿಸಿದ್ದ ಮಿತಿ ಆಗಸ್ಟ್ ೩೧ರಿಂದ ರದ್ದಾಗಲಿದೆ.
ನಾಗರಿಕ ವಿಮಾನಯಾನ ಸಚಿವಾಲಯ ಈ ವಿಷಯವನ್ನು ಬುಧವಾರ ಘೋಷಿಸಿದೆ. ಇದರಿಂದ ಸಂಕಷ್ಟದಲ್ಲಿರುವ ಏರ್‌ಲೈನ್‌ಗಳಿಗೆ ನಷ್ಟವನ್ನು ಕಡಿಮೆ ಮಾಡಲು ಹಾದಿ ಸುಗಮವಾಗಿದೆ.
ಎಟಿಎಫ್ ದರ, ದಿನ ನಿತ್ಯದ ಪ್ರಯಾಣಿಕರ ಸಂಚಾರದ ದಟ್ಟಣೆ, ಬೇಡಿಕೆಯನ್ನು ಪರಿಗಣಿಸಿ ವಿಮಾನಯಾನ ಸಚಿವಾಲಯ ತಿಳಿಸಿದೆ. ವೈಮಾನಿಕ ಉದ್ದಿಮೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ.