Site icon Vistara News

ದುಬಾರಿ ಏರ್ ಟಿಕೆಟ್‌ ದರಗಳು ಶೀಘ್ರದಲ್ಲೇ ಗಣನೀಯ ಇಳಿಕೆಯಾಗುವ ನಿರೀಕ್ಷೆ

flight emergency landing

ಮುಂಬಯಿ: ಏರ್‌ ಟಿಕೆಟ್‌ ದರಗಳು ಶೀಘ್ರದಲ್ಲಿಯೇ ಗಣನೀಯ ಇಳಿಕೆಯಾಗಲಿವೆ ಎಂದು ಸೆಂಟರ್‌ ಫಾರ್‌ ಏಷ್ಯಾ ಪೆಸಿಫಿಕ್‌ ಏವಿಯೇಶನ್‌ (CAPA) ತಿಳಿಸಿದೆ.

ಈಗಿನ ದರಗಳು ಉನ್ನತಮಟ್ಟದಲ್ಲಿದ್ದು, ಇದೇ ರೀತಿ ಮುಂದುವರಿದರೆ ಏರ್‌ಲೈನ್‌ಗಳ ವ್ಯವಹಾರ ಸಂಕಷ್ಟಕ್ಕೆ ಸಿಲುಕಬಹುದು. ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ದರ ಇಳಿಕೆಯಾಗಲಿವೆ ಎಂದು ತಿಳಿಸಿದೆ.

ಸಿಎಪಿಎ ೨೦೨೨-೨೩ರ ಮುನ್ನೋಟದಲ್ಲಿ ಏರ್‌ಟಿಕೆಟ್‌ಗಳ ಉನ್ನತ ದರದ ಪರಿಣಾಮ ಕಳೆದ ಮೂರು ತಿಂಗಳುಗಳಲ್ಲಿ ವಿಮಾನ ಪ್ರಯಾಣಕ್ಕೆ ಬೇಡಿಕೆ ಕುಸಿದಿದೆ. ದೇಶಿ ವಿಮಾನಯಾನ ವಲಯದಲ್ಲಿ ಪ್ರಯಾಣಿಕರ ದಟ್ಟಣೆ ೧೩-೧೪ ಕೋಟಿಗೆ ತಲಪುವ ಸಾಧ್ಯತೆ ಇದೆ. ಅಂದರೆ ೨೦೧೯-೨೦ಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ ಎಂದು ವಿವರಿಸಿದೆ.

ಪ್ರಸ್ತುತ ಏರ್‌ಟಿಕೆಟ್‌ಗಳ ಕನಿಷ್ಠ ಮತ್ತು ಗರಿಷ್ಠ ದರಗಳನ್ನು ಸರ್ಕಾರ ನಿಗದಿಪಡಿಸಿ ನಿಯಂತ್ರಿಸುತ್ತಿದೆ. ೨೦೨೦ರ ಮೇನಲ್ಲಿ ಈ ದರಗಳ ಮಿತಿಯನ್ನು ಆರಂಭಿಸಲಾಗಿತ್ತು.

Exit mobile version