Site icon Vistara News

ONDC | ಕೇಂದ್ರದಿಂದ ಫ್ಲಿಪ್‌ಕಾರ್ಟ್‌, ಅಮೆಜಾನ್‌ಗೆ ಪರ್ಯಾಯ ಒಎನ್‌ಡಿಸಿ ಬೆಂಗಳೂರಿನಲ್ಲೇ ಶುರು!

ONDC

African American Hands Shopping In Online Ecommerce Store

ಬೆಂಗಳೂರು: ಇ-ಕಾಮರ್ಸ್‌ ವಲಯದಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಪ್ರಾಬಲ್ಯವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಇಂದು ಮಹತ್ತ್ವಾಕಾಂಕ್ಷೆಯ ಒಎನ್‌ಡಿಸಿ (Open Network for Digital Commerce- ONDC) ಎಂಬ ಡಿಜಿಟಲ್‌ ಪ್ಲಾಟ್‌ಫಾರ್ಮ್‌ ಅನ್ನು ಬೆಂಗಳೂರಿನಲ್ಲಿ ಇಂದು ಆರಂಭಿಸಿದೆ.

ಸರ್ಕಾರ ಸಣ್ಣ ವ್ಯಾಪಾರಸ್ಥರಿಗೆ ಇ-ಕಾಮರ್ಸ್‌ ವಹಿವಾಟಿಗೆ ಸಹಕರಿಸಲು ಹಾಗೂ ಅಮೆಜಾನ್‌ ಮತ್ತು ವಾಲ್‌ಮಾರ್ಟ್‌ನಂಥ ದಿಗ್ಗಜ ಕಂಪನಿಗಳ ಪಾರಮ್ಯವನ್ನು ನಿಯಂತ್ರಿಸಲು, ಅವುಗಳಿಗೆ ಪರ್ಯಾಯವಾಗಿ ಒಎನ್‌ಡಿಸಿಯನ್ನು ಆರಂಭಿಸಿದೆ. ಒಎನ್‌ಡಿಸಿಯಲ್ಲಿ ಸ್ಥಳೀಯ ವರ್ತಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಗ್ರಾಹಕರು ತಮಗೆ ಬೇಕಾದ ಮಾರಾಟಗಾರರಿಂದ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದು.

ಬೆಂಗಳೂರಿನಲ್ಲಿರುವ ಗ್ರಾಹಕರು ಈಗ ಒಎನ್‌ಡಿಸಿ ನೆಟ್‌ ವರ್ಕ್‌ ಮೂಲಕ ಹಲವಾರು ಕೆಟಗರಿಗಳಲ್ಲಿ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಪಡೆಯಬಹುದು. ಪ್ರಸ್ತುತ ದಿನಸಿ ಮತ್ತು ರೆಸ್ಟೊರೆಂಟ್‌ಗಳ ಉತ್ಪನ್ನ ಮತ್ತು ಸೇವೆಗಳನ್ನು ಖರೀದಿಸಬಹುದು.

ಈ ಉಪಕ್ರಮದಿಂದ ಗ್ರಾಹಕರಿಗೆ ಮತ್ತು ಸಣ್ಣ ಬಿಸಿನೆಸ್‌ ಮಾಡುವವರಿಗೆ ಅನುಕೂಲವಾಗಲಿದೆ. ಸಣ್ಣ ಉದ್ದಿಮೆಗಳಿಗೆ ಇ-ಕಾಮರ್ಸ್‌ ವೇದಿಕೆಯ ಅನುಕೂಲ ಸಿಗಲಿದೆ. ಗ್ರಾಹಕರಿಗೆ ಒಂದೇ ಕಡೆ ಹಲವು ಬ್ರಾಂಡ್‌ಗಳ ಉತ್ಪನ್ನ ಮತ್ತು ಸೇವೆಗಳ ಖರೀದಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ದಿಲ್ಲಿ, ಎನ್‌ಸಿಆರ್‌, ಬೆಂಗಳೂರು, ಭೋಪಾಲ್‌, ಶಿಲ್ಲೋಂಗ್‌, ಕೊಯಮತ್ತೂರಿನಲ್ಲಿ ಪ್ರಾಯೋಗಿಕವಾಗಿ ಒಎನ್‌ಡಿಸಿ ಡಿಜಿಟಲ್‌ ಇ-ಕಾಮರ್ಸ್‌ ಸೇವೆಯನ್ನು ಆರಂಭಿಸಲಾಗಿದೆ. 20 ಸಂಸ್ಥೆಗಳು ಒಎನ್‌ಡಿಸಿಯಲ್ಲಿ 255 ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ. ಎಸ್‌ಬಿಐ, ಯುಕೊ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಈಗಾಗಲೇ ಹೂಡಿಕೆಗೆ ಬದ್ಧವಾಗಿವೆ.

ಇದನ್ನೂ ಓದಿ: ONDC | ಅಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ಪರ್ಯಾಯವಾಗಿ ಶೀಘ್ರ ಬರಲಿದೆ ಕೇಂದ್ರ ಸರ್ಕಾರದ ಒಎನ್‌ಡಿಸಿ!

Exit mobile version