Site icon Vistara News

Shopping | ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌, ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಆರಂಭ

online shoping

ನವ ದೆಹಲಿ: ಇ-ಕಾಮರ್ಸ್‌ ದಿಗ್ಗಜ ಕಂಪನಿಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ತಮ್ಮ ಗ್ರಾಹಕರಿಗೆ ವಿಶೇಷ ಶಾಪಿಂಗ್‌ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌, ಫ್ಲಿಪ್‌ಕಾರ್ಟ್‌ನ ಬಿಗ್‌ ಬಿಲಿಯನ್‌ ಡೇಸ್‌, ಗ್ರಾಹಕರಿಗೆ (Shopping) ಹಲವು ಆಫರ್‌ಗಳನ್ನು ನೀಡುತ್ತಿವೆ.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2022 ಗುರುವಾರ ಶುರುವಾಗಿದೆ. ಸೆಪ್ಟೆಂಬರ್‌ 30 ತನಕ ನಡೆಯಲಿದೆ. ಮೊದಲ ದಿನ ಪ್ರೈಮ್‌ ಸದಸ್ಯರಿಗೆ ಮೀಸಲಾಗಿದೆ. ಎರಡನೇ ದಿನದಿಂದ ಎಲ್ಲ ಗ್ರಾಹಕರು ಶಾಪಿಂಗ್‌ ಮಾಡಬಹುದು. ಲ್ಯಾಪ್‌ಟಾಪ್‌ಗಳಲ್ಲಿ ಕೆಲವು ಬ್ರಾಂಡ್‌ಗಳಿಗೆ 40% ತನಕ ಡಿಸ್ಕೌಂಟ್‌ ಪ್ರಕಟಿಸಲಾಗಿದೆ. ಅಧಿಕ ವಾರಂಟಿ ಅವಧಿ, ಸುಲಭ ಇಎಂಐ, ಹಳೆಯ ಲ್ಯಾಪ್‌ ಟಾಪ್‌ ವಿನಿಮಯಕ್ಕೆ ಹೆಚ್ಚು ಮೌಲ್ಯ ಇತ್ಯಾದಿ ಕೊಡುಗೆಗಳನ್ನು ಪಡೆಯಬಹುದು.

ಫ್ಲಿಪ್‌ಕಾರ್ಟ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಕೂಡ ಸೆಪ್ಟೆಂಬರ್‌ 23ರಿಂದ ಆರಂಭವಾಗುತ್ತದೆ. ಈ ಸಲ ಐಫೋನ್‌ 11, ಐಫೋನ್‌ 13 ಡಿಸ್ಕೌಂಟ್‌ ದರದಲ್ಲಿ ದೊರೆಯಲಿದೆ. ಇದು ಸೆಪ್ಟೆಂಬರ್‌ 23ರಿಂದ 30ರ ತನಕ ನಡೆಯಲಿದೆ. ಎರಡೂ ಕಂಪನಿಗಳು ಅನೇಕ ಉತ್ಪನ್ನಗಳ ಮೇಲೆ ಡಿಸ್ಕೌಂಟ್‌ ಘೋಷಿಸಿವೆ.

Exit mobile version