ನವ ದೆಹಲಿ: ಇ-ಕಾಮರ್ಸ್ ದಿಗ್ಗಜ ಅಮೆಜಾನ್‌ನ ಪ್ರೈಮ್ ಮೆಂಬರ್‌ಶಿಪ್ ಇನ್ನು ಮುಂದೆ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್‌ಗಿಂತಲೂ ದುಬಾರಿಯಾಗಲಿದೆ. (Amazon Prime membership) ದರ ಏರಿಕೆಯನ್ನು ಅಮೆಜಾನ್ ಘೋಷಿಸಿದೆ. ಮಾಸಿಕ ಮತ್ತು 3 ತಿಂಗಳಿನ ಪ್ಲಾನ್‌ಗಳಲ್ಲಿ 140 ರೂ. ತನಕ ಹೆಚ್ಚಳವಾಗಲಿದೆ.
ಹೊಸ ದರ ಎಷ್ಟು? ಅಮೆಜಾನ್ ಪ್ರೈಮ್ ಮೆಂಬರ್‌ಶಿಪ್‌ನಲ್ಲಿ ಮಾಸಿಕ ಪ್ಲಾನ್ 299 ರೂ. ಮತ್ತು 3 ತಿಂಗಳಿನ ಪ್ಲಾನ್ 599 ರೂ.ಗೆ ನಿಗದಿಯಾಗಿದೆ. ವಾರ್ಷಿಕ ಸದಸ್ಯತ್ವ ಶುಲ್ಕವನ್ನು ಮಾತ್ರ ಬದಲಿಸಿಲ್ಲ. ಅದು 1,499 ರೂ.ಗಳ ಮಟ್ಟದಲ್ಲಿದೆ. ಅಮೆಜಾನ್ ತನ್ನ ಪ್ರೈಮ್ ಲೈಟ್ ಮೆಂಬರ್‌ಶಿಪ್ (Prime lite membership) ದರವನ್ನು 999 ರೂ.ಗಳಲ್ಲಿ ಇರಿಸಿದೆ. ಇದು ರೆಗ್ಯುಲರ್ ಮೆಂಬರ್‌ಶಿಪ್‌ನ ಬಹುತೇಕ ಸೌಲಭ್ಯಗಳನ್ನು ನೀಡುತ್ತದೆ.
ಹಳೆ ದರ ಎಷ್ಟು? ಅಮೆಜಾನ್ ಪ್ರೈಮ್ ಸಬ್‌ಸ್ಕ್ರಿಪ್ಷನ್ ಈ ಹಿಂದೆ ಮಾಸಿಕ 179 ರೂ. ಮತ್ತು ತ್ರೈಮಾಸಿಕಕ್ಕೆ 459 ರೂ. ಇತ್ತು. ಮಾಸಿಕ ಪ್ಲಾನ್‌ನಲ್ಲಿ 60% ತ್ರೈಮಾಸಿಕ ಪ್ಲಾನ್‌ನಲ್ಲಿ 30% ಏರಿಸಲಾಗಿದೆ. ಭಾರತದಲ್ಲಿ ನೆಟ್‌ಫ್ಲಿಕ್ಸ್ ಸಬ್‌ಸ್ಕ್ರಿಪ್ಷನ್ ಮೊಬೈಲ್‌ಗೆ 149 ರೂ.ಗಳಿಂದ ಶುರುವಾಗುತ್ತದೆ. ಇದು ಬೇಸಿಕ್ ಪ್ಲಾನ್ ಆಗಿದ್ದು, 199 ರೂ.ಗೆ ಎಚ್‌ಡಿ ವೀಡಿಯೊ ಸ್ಟ್ರೀಮ್ ಅನ್ನು ಪಡೆಯಬಹುದು. ಸ್ಟ್ಯಾಂಡರ್ಡ್ ಪ್ಲಾನ್ 499 ರೂ. ವೆಚ್ಚದ್ದಾಗಿದೆ. ಪ್ರೀಮಿಯಂ ಪ್ಲಾನ್ 649 ರೂ.ಗಳದ್ದಾಗಿದೆ.
ಅಮೆಜಾನ್ ಪ್ರೈಮ್ ಸಬ್‌ಸ್ಕ್ರಿಪ್ಷನ್‌ನಲ್ಲಿ ಪ್ರೈಮ್ ವಿಡಿಯೊ, ಉತ್ಪನ್ನಗಳ ತ್ವರಿತ ಬಿಡುಗಡೆ, ಪ್ರೈಮ್ ಮ್ಯೂಸಿಕ್ ಸಬ್‌ಸ್ಕ್ರಿಪ್ಷನ್ ಮುಂತಾದ ಸೌಲಭ್ಯ ಪಡೆಯಬಹುದು. ಅಮೆಜಾನ್ ಕಳೆದ ವರ್ಷ ನವೆಂಬರ್‌ನಲ್ಲಿ ಪ್ರೈಮ್ ವಿಡಿಯೊ ಪ್ಲಾನ್ ಅನ್ನು ಮೊಬೈಲ್‌ಗೆ ಅನ್ವಯಿಸಿತ್ತು. ಇದರ ಸಬ್‌ಸ್ಕ್ರಿಪ್ಷನ್ ದರ 599 ರೂ.ಗಳಾಗಿತು. ಆಯ್ದ ದೇಶಗಳಲ್ಲಿ ಮಾತ್ರ ಇದು ಸಿಗುತ್ತಿತ್ತು.
ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್‌ನ ಹಳೆಯ ಮತ್ತು ಹೊಸ ದರ ಇಂತಿದೆ.
ಮಾಸಿಕ ಪ್ಲಾನ್ ಹಳೆ ದರ 179 ರೂ. | ಹೊಸ ದರ 299 ರೂ. |
ತ್ರೈಮಾಸಿಕ ದರ 459 ರೂ. | ಹೊಸ ದರ 599 |