ನವ ದೆಹಲಿ: ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಟಾಪ್ ೩ ಐಟಿ ಕಂಪನಿಗಳ ಪೈಕಿ ಇನ್ಫೋಸಿಸ್‌ನಿಂದ ಅತಿ ಹೆಚ್ಚು ಉದ್ಯೋಗಿಗಳು ವಲಸೆ ಹೋಗಿದ್ದಾರೆ.
ಕಳೆದ ಏಪ್ರಿಲ್-ಜೂನ್‌ನಲ್ಲಿ ಇನ್ಫೋಸಿಸ್‌ನಿಂದ ಉದ್ಯೋಗಿಗಳ ವಲಸೆಯ ಪ್ರಮಾಣ ೨೮.೪% ಇತ್ತು. ವಿಪ್ರೊದಲ್ಲಿ ೨೩.3% ಹಾಗೂ ಟಿಸಿಎಸ್‌ನಲ್ಲಿ ೧೯.೭% ಉದ್ಯೋಗಿಗಳು ಕಂಪನಿಯನ್ನು ತೊರೆದಿದ್ದಾರೆ.
೨೦೨೨ರ ಏಪ್ರಿಲ್-ಜೂನ್‌ನಲ್ಲಿ ಉದ್ಯೋಗಿಗಳ ವಲಸೆಯ ಪ್ರಮಾಣ
ಇನ್ಫೋಸಿಸ್ | 28.4% |
ವಿಪ್ರೊ | 23.3% |
ಟಿಸಿಎಸ್ | 19.7% |
ಇನ್ಫೋಸಿಸ್‌ನಿಂದ ಉದ್ಯೋಗಿಗಳ ವಲಸೆ ಕಳೆದ ಏಪ್ರಿಲ್-ಜೂನ್ ಅವಧಿಯಲ್ಲಿ ೨೮.೪% ಆಗಿದ್ದರೂ, ಇದೇ ಅವಧಿಯಲ್ಲಿ ಕಂಪನಿಯು ೨0,588 ಉದ್ಯೋಗಿಗಳನ್ನು ಸೇರಿಸಿತ್ತು ಎಂಬುದೂ ಗಮನಾರ್ಹ. ಜೂನ್ ೩೦ರ ವೇಳೆಗೆ ಇನ್ಫೋಸಿಸ್‌ನ ಒಟ್ಟು ಉದ್ಯೋಗಿಗಳ ಸಂಖ್ಯೆ ೩,೩೫,೧೮೬ಕ್ಕೆ ಏರಿಕೆಯಾಗಿತ್ತು.
೨೦೨೨ರ ಏಪ್ರಿಲ್-ಜೂನ್‌ನಲ್ಲಿ ಹೊಸ ಉದ್ಯೋಗಿಗಳ ಸೇರ್ಪಡೆ ಎಲ್ಲಿ-ಎಷ್ಟು?
ಇನ್ಫೋಸಿಸ್ | 20,588 |
ವಿಪ್ರೊ | 15,331 |
ಟಿಸಿಎಸ್ | 14,136 |