Site icon Vistara News

Amul price hike| ಅಮುಲ್, ಮದರ್‌ ಡೇರಿ ಹಾಲಿನ ದರದಲ್ಲಿ 2 ರೂ. ಏರಿಕೆ

amul

ನವ ದೆಹಲಿ: ಅಮುಲ್‌ ಮತ್ತು ಮದರ್‌ ಡೇರ್‌ ಹಾಲಿನ ದರದಲ್ಲಿ ಪ್ರತಿ ಲೀಟರ್‌ಗೆ ದರದಲ್ಲಿ ೨ ರೂ. ಏರಿಕೆಯಾಗಿದೆ. ಆಗಸ್ಟ್‌ ೧೭ರಿಂದ ಹೊಸ ದರಗಳು ( Amul price hike) ಅನ್ವಯವಾಗಲಿದೆ. ಈ ವರ್ಷ ಈ ಕಂಪನಿಗಳು ಎರಡನೇ ಬಾರಿಗೆ ದರ ಏರಿಸಿದಂತಾಗಿದೆ. 2 ರೂ. ಏರಿಕೆಯಿಂದ ಎಂಆರ್‌ಪಿ ದರದಲ್ಲಿ ೪% ದರ ಹೆಚ್ಚಳವಾದಂತಾಗಿದೆ.

ಗುಜರಾತ್‌ನ ಅಹಮದಾಬಾದ್‌ ಮತ್ತು ಸೌರಾಷ್ಟ್ರ, ದಿಲ್ಲಿ-ಎನ್‌ಸಿಆರ್‌, ಪಶ್ಚಿಮ ಬಂಗಾಳ, ಮುಂಬಯಿ ಹಾಗೂ ಅಮುಲ್‌ ಉತ್ಪನ್ನಗಳು ಮಾರಾಟವಾಗುವ ಇತರ ಕಡೆಗಳಲ್ಲಿ ಪರಿಣಾಮ ಬೀರಲಿದೆ.

ಅಮುಲ್‌ ಉತ್ಪನ್ನಗಳ ಪರಿಷ್ಕೃತ ದರ ಇಂತಿದೆ:

ಹಾಲಿನ ಉತ್ಪಾದನೆಯಲ್ಲಿನ ಒಟ್ಟಾರೆ ವೆಚ್ಚದಲ್ಲಿ ಏರಿಕೆಯಾಗಿರುವುದರಿಂದ ದರ ಏರಿಕೆ ಅನಿವಾರ್ಯವಾಗಿದೆ. ಜಾನುವಾರುಗಳ ಮೇವು ೨೦% ಏರಿಕೆಯಾಗಿದೆ ಎಂದು ಅಮುಲ್‌ ತಿಳಿಸಿದೆ.

ದಿಲ್ಲಿ-ಎನ್‌ಸಿಆರ್‌ ವಲಯದಲ್ಲಿ ಮುಂಚೂಣಿಯಲ್ಲಿರುವ ಮದರ್‌ ಡೇರಿ ಕೂಡ ತನ್ನ ಹಾಲಿನ ತ್ಪನ್ನಗಳ ದರವನ್ನು ಏರಿಸಿದೆ. ಫುಲ್‌ ಕ್ರೀಮ್‌ ಹಾಲಿನ ದರ ಲೀಟರ್‌ಗೆ ೫೯ ರೂ.ಗಳಿಂದ ೬೧ ರೂ.ಗೆ ಏರಿಕೆಯಾಗಿದೆ. ಟೋನ್ಡ್‌ ಹಾಲಿನ ದರ ೫೧ ರೂ.ಗೆ ಪರಿಷ್ಕರಣೆಯಾಗಿದೆ.

Exit mobile version