Site icon Vistara News

Anant Ambani : ಅನಂತ್‌ ಅಂಬಾನಿ, ರಾಧಿಕಾ ಮರ್ಚಂಟ್‌ ವಿವಾಹ ನಿಶ್ಚಿತಾರ್ಥ, ಮೊದಲ ಫೊಟೊಗಳ ಬಿಡುಗಡೆ

ananth ambani

ಮುಂಬಯಿ: ಉದ್ಯಮಿ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ‌ (Anant Ambani) ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮವು ಅಂಬಾನಿಯವರ ಅಂಟಿಲಾ ನಿವಾಸದಲ್ಲಿ ಗುರುವಾರ ಸಾಂಪ್ರದಾಯಿಕವಾಗಿ ನಡೆಯಿತು.

ಉಭಯ ಕುಟುಂಬಗಳ ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ವಿವಾಹ ನಿಶ್ಚಿತಾರ್ಥ ನಡೆಯಿತು. ಗೋದಾನ, ಚುನಾರಿ ವಿಧಿ ಸೇರಿದಂತೆ ಸಂಪ್ರದಾಯದ ಪ್ರಕಾರ ಕಾರ್ಯಕ್ರಮ ನಡೆಯಿತು. ಉಡುಗೊರೆಗಳ ವಿನಿಮಯ ನಡೆಯಿತು.

ಅಂಬಾನಿ ಕುಟುಂಬದ ಸದಸ್ಯರು ಮರ್ಚಂಟ್‌ ಕುಟುಂಬದವರನ್ನು ಆರತಿ ಬೆಳಗಿ ಸ್ವಾಗತಿಸಿದರು. ಗಣೇಶ ಪೂಜೆಯ ಬಳಿಕ ಸಾಂಪ್ರದಾಯಿಕ ಲಗ್ನ ಪತ್ರಿಕೆಯನ್ನು ಓದಲಾಯಿತು. ಅನಂತ್‌ ಮತ್ತು ರಾಧಿಕಾ ಉಂಗುರಗಳನ್ನು ವಿನಿಮಯ ಮಾಡಿಕೊಂಡರು.

ಇದನ್ನೂ ಓದಿ: ಅಂಬಾನಿ ಭಾವಿ ಸೊಸೆಯ ಅರಂಗೇಟ್ರಂ: ಯಾರು ಈ ರಾಧಿಕಾ ಮರ್ಚಂಟ್?

Exit mobile version