ಏಷ್ಯಾದ ಬಿಲಿಯನೇರ್ ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ (Anant Radhika Wedding) ಈಗ ವಿಶ್ವದ ಗಮನ ಸೆಳೆದಿದೆ. ಅಂತೆಯೇ ಈ ಹಿಂದೆ ವಿಶ್ವದ ಗಮನ ಸೆಳೆದ ಐದು ಪ್ರಮುಖ ಅದ್ದೂರಿ ಮದುವೆಗಳು ಯಾರದ್ದು, ಹೇಗಿತ್ತು ಗೊತ್ತೇ?
ಸುಮಾರು 5000- 6000 ಕೋಟಿ ರೂಪಾಯಿ ಖರ್ಚು ಮಾಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಭರ್ಜರಿಯಾಗಿ ನೆರವೇರಿದೆ. ಅಂತೆಯೇ ವಿಶ್ವದ 5 ವಿವಾಹ ಕಾರ್ಯಕ್ರಮಗಳನ್ನು ಅತ್ಯಂತ ದುಬಾರಿ ವಿವಾಹಗಳು ಎಂದೇ ಪರಿಗಣಿಸಲಾಗಿದೆ.
1. ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್
1979ರಲ್ಲಿ ರಾಜಕುಮಾರಿ ಸಲಾಮಾ ಅವರನ್ನು ವಿವಾಹವಾದ ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ತಮ್ಮ ಮದುವೆಗಾಗಿ 137 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 11,44,21,50,950 ರೂಪಾಯಿ ಖರ್ಚು ಮಾಡಿದ್ದರು. ಮದುವೆಯು ಐದು ದಿನಗಳ ಕಾಲ ನಡೆಯಿತು. ಈ ಸಮಾರಂಭದಲ್ಲಿ ವಧುವಿಗೆ ಮದುವೆಯ ಉಡುಗೊರೆಗಳಾಗಿ 20 ಬೆಜೆವೆಲ್ಡ್ ಒಂಟೆಗಳನ್ನು ನೀಡಲಾಯಿತು. ಈ ಮದುವೆಯು ಅತ್ಯಂತ ದುಬಾರಿ ವಿವಾಹಕ್ಕಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದಿದೆ.
2. ಮೊನಾಕೊದ ಪ್ರಿನ್ಸ್ ಆಲ್ಬರ್ಟ್ II
ಮೊನಾಕೊದ ಪ್ರಿನ್ಸ್ ಆಲ್ಬರ್ಟ್ II ಮತ್ತು ಚಾರ್ಲೀನ್ ವಿಟ್‌ಸ್ಟಾಕ್ 2011ರಲ್ಲಿ ವಿವಾಹವಾಗಿದ್ದು, ಈ ರಾಜಮನೆತನದ ವಿವಾಹವು ಬಹು ದಿನಗಳ ಆಚರಣೆಗಳನ್ನು ಒಳಗೊಂಡಿತ್ತು. ಇದು ಪ್ರಿನ್ಸ್ ಅರಮನೆಯಲ್ಲಿ ನಡೆದ ಸಮಾರಂಭ. ಮೊನಾಕೊದಲ್ಲಿ ಗಣ್ಯರು ಮತ್ತು ಪ್ರಸಿದ್ಧ ವ್ಯಕ್ತಿಗಳಿಗೆ ಅದ್ದೂರಿ ಪಾರ್ಟಿಯನ್ನು ಆಯೋಜಿಸಲಾಗಿತ್ತು. ಈ ಮದುವೆಗಾಗಿ 70 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 5,847,779,000 ರೂ. ಗಳನ್ನು ಖರ್ಚು ಮಾಡಲಾಗಿತ್ತು.
3. ವನಿಶಾ ಮಿತ್ತಲ್
ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಮಗಳು ವನಿಶಾ ಮಿತ್ತಲ್ ಅವರು ಅಮಿತ್ ಭಾಟಿಯಾ ಅವರೊಂದಿಗೆ
2004ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಐಷಾರಾಮಿ ವಸತಿ ಮತ್ತು ಸಾಂಪ್ರದಾಯಿಕ ಆಚರಣೆಗಳಿಂದ ಗುರುತಿಸಲ್ಪಟ್ಟ ಈ ವಿವಾಹಕ್ಕೆ 66 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 5,512,392,006 ರೂ. ವೆಚ್ಚವಾಗಿತ್ತು.
4. ಪ್ರಿನ್ಸ್ ಚಾರ್ಲ್ಸ್
ಪ್ರಿನ್ಸ್ ಚಾರ್ಲ್ಸ್ ಮತ್ತು ಪ್ರಿನ್ಸೆಸ್ ಡಯಾನಾ 1981ರಲ್ಲಿ ವಿವಾಹವಾಗಿದ್ದು, ಇವರ ವಿವಾಹವು ಅತ್ಯಂತ ಸಾಂಪ್ರದಾಯಿಕ ಮತ್ತು ದುಬಾರಿ ವಿವಾಹಗಳಲ್ಲಿ ಒಂದಾಗಿದೆ. ಸೇಂಟ್ ಪಾಲ್ಸ್ ಕ್ಯಾಥೆಡ್ರಲ್‌ನಲ್ಲಿ ನಡೆದ ಈ ಮದುವೆಗೆ 750 ಮಿಲಿಯನ್ ಜನರು ಸಾಕ್ಷಿಯಾಗಿದ್ದರು. 48 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 4,007,368,656 ರೂಪಾಯಿ ವೆಚ್ಚವಾಗಿದೆ.
ಇದನ್ನೂ ಓದಿ: Anant Radhika Wedding: ಅನಂತ್ ರಾಧಿಕಾ ಮದುವೆಯಲ್ಲಿ 160 ವರ್ಷಗಳ ಹಿಂದಿನ ಸೀರೆ ಧರಿಸಿ ಮಿಂಚಿದ ಅಲಿಯಾ
5. ಪ್ರಿನ್ಸ್ ವಿಲಿಯಂ
ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಮಿಡಲ್‌ಟನ್ 2011ರಲ್ಲಿ ವಿವಾಹವಾಗಿದ್ದು, ಅವರ ಹೆತ್ತವರ ಮದುವೆಗಿಂತ ಕಡಿಮೆ ಅತಿರಂಜಿತವಾಗಿದ್ದರೂ ಕೇಂಬ್ರಿಡ್ಜ್‌ನ ಡ್ಯೂಕ್ ಮತ್ತು ಡಚೆಸ್ ಸಂಪ್ರದಾಯದ ವಿವಾಹಗಳು ಜಾಗತಿಕವಾಗಿ ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿತ್ತು. ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಅದ್ದೂರಿ ಮೆರವಣಿಗೆ ಮತ್ತು ವಿಶೇಷ ಅತಿಥಿ ಸತ್ಕಾರ ಕಾರ್ಯಕ್ರಮವನ್ನು ಒಳಗೊಂಡಿತ್ತು. 34 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 2,838,056,500 ರೂಪಾಯಿ ಖರ್ಚಾಗಿತ್ತು.