Site icon Vistara News

ಅನಂತ್‌ ಟೆಕ್ನಾಲಜೀಸ್‌ನಿಂದ ಬೆಂಗಳೂರಿನಲ್ಲಿ ಬಾಹ್ಯಾಕಾಶ ನೌಕೆ ಉತ್ಪಾದನಾ ಕೇಂದ್ರ ಆರಂಭ

ananth technologies

ಬೆಂಗಳೂರು: ಇಸ್ರೋ ಅಧ್ಯಕ್ಷ ಎಸ್.‌ ಸೋಮನಾಥ್‌ ಅವರು ಬುಧವಾರ ಅನಂತ್‌ ಟೆಕ್ನಾಲಜೀಸ್‌ ಕಂಪನಿಯ ಬಾಹ್ಯಾಕಾಶ ನೌಕೆ (Spacecraft) ಉತ್ಪಾದನಾ ಕೇಂದ್ರವನ್ನು ಬೆಂಗಳೂರಿನಲ್ಲಿ ಉದ್ಘಾಟಿಸಿದರು.

ಕೆಐಎಡಿಬಿಯ ಏರೊಸ್ಪೇಸ್‌ ಪಾರ್ಕ್‌ನಲ್ಲಿ 15,000 ಚದರ ಅಡಿ ಪ್ರದೇಶದ ಬಾಹ್ಯಾಕಾಶ ನೌಕೆ ಉತ್ಪಾದನಾ ಕೇಂದ್ರವನ್ನು ಅನಂತ್‌ ಟೆಕ್ನಾಲಜೀಸ್‌ ಆರಂಭಿಸಿದೆ. ಈ ಘಟಕವು ಏಕಕಾಲಕ್ಕೆ ನಾಲ್ಕು ಬೃಹತ್‌ ಬಾಹ್ಯಾಕಾಶ ನೌಕೆಗಳ ಜೋಡಣೆ, ಸಂಯೋಜನೆ ಮತ್ತು ಟೆಸ್ಟಿಂಗ್‌ ಅನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದ ಬಾಹ್ಯಾಕಾಶ ನೀತಿಯು ಅತ್ಯುತ್ತಮವಾಗಿದ್ದು ಭಾರತ ಈಗ ದೇಶೀಯ ಬಳಕೆಗೆ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಗೂ ಉಪಗ್ರಹಗಳನ್ನು ಪೂರೈಸಬಲ್ಲುದು ಎಂದರು.

ದೇಶದಲ್ಲಿ ರಿಮೋಟ್‌ ಸೆನ್ಸಿಂಗ್‌ ಡೇಟಾ ನೀತಿ ಮತ್ತು ಲಾಂಚ್‌ ವೆಹಿಕಲ್‌ ನೀತಿ ರಚನೆಯಾಗುತ್ತಿದೆ. ಇದು ಜಾರಿಯಾದ ಬಳಿಕ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಗಳು ಹೊಸ ಎತ್ತರಕ್ಕೇರಲಿದೆ. ಅನಂತ್‌ ಟೆಕ್ನಾಲಜೀಸ್‌ ಮಹತ್ವದ ಹೆಜ್ಜೆಯನ್ನಿಟಿದೆ. ಇಂಥ ಉದ್ಯಮಶೀಲತೆ ಅಗತ್ಯವಿದೆ ಎಂದು ವಿವರಿಸಿದರು.

ಇಸ್ರೋ 1992ರಲ್ಲಿ ಸ್ಥಾಪನೆಯಾದಂದಿನಿಂದ ಇದೇ ಮೊದಲ ಬಾರಿಗೆ ಇಂಥ ಘಟಕ ಸ್ಥಾಪನೆಯಾಗುತ್ತಿದೆ. ಅನಂತ್‌ ಟೆಕ್ನಾಲಜೀಸ್‌, ಇಸ್ರೋದಿಂದ 89 ಉಪಗ್ರಹ ಮತ್ತು 69 ಲಾಂಚ್‌ ವೆಹಿಕಲ್‌ಗಳನ್ನು ನಿರ್ಮಿಸಲು ಇಸ್ರೋಗೆ ಸಹಕರಿಸಿದೆ.

ಹೈದರಾಬಾದ್‌ ಮೂಲದ ಅನಂತ್‌ ಟೆಕ್ನಾಲಜೀಸ್‌ ಏರೊಸ್ಪೇಸ್‌ ಉತ್ಪಾದಕ ಕಂಪನಿಯಾಗಿದೆ. ಉಪಗ್ರಹ, ಉಪಗ್ರಹ ಉಡಾವಣಾ ವಾಹಕಗಳಿಗೆ ಬೇಕಾದ ಹಾರ್ಡ್‌ ವೇರ್‌ ಮತ್ತು ಸಾಫ್ಟ್‌ವೇರ್‌ ಗಳನ್ನು ಒದಗಿಸುತ್ತದೆ.

Exit mobile version