Site icon Vistara News

‌Apple iPhone : ಆ್ಯಪಲ್‌ ಡೆಸ್ಕ್‌ಟಾಪ್‌, ಲ್ಯಾಪ್‌ಟಾಪ್‌ ಮಾರಾಟ ಜನವರಿ-ಮಾರ್ಚ್‌ನಲ್ಲಿ ತೀವ್ರ ಕುಸಿದಿದ್ದೇಕೆ?

Apple iPhone Apple desktop, laptop sales fell sharply in January-March?

ನವ ದೆಹಲಿ: ಆ್ಯಪಲ್‌ ಇಂಡಿಯಾ ಕಂಪನಿಯ ( Apple iPhone) ಡೆಸ್ಕ್‌ ಟಾಪ್‌ ಮತ್ತು ಲ್ಯಾಪ್‌ ಟಾಪ್‌ ಮಾರಾಟವು ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ ತೀವ್ರ ಕುಸಿದಿದೆ. ಹೀಗಾಗಿ ಇದಕ್ಕೆ ಕಾರಣವೇನು ಎಂಬ ಕುತೂಹಲವೂ ಉಂಟಾಗಿದೆ. ಮಾರುಕಟ್ಟೆ ತಜ್ಞರ ಪ್ರಕಾರ ನಿಧಾನವಾಗಿ ಬೇಡಿಕೆಯ ಕುಸಿತ, ಉದ್ಯಮ ವಲಯದಲ್ಲಿ ನಡೆಯುತ್ತಿರುವ ಹುದ್ದೆ ಕಡಿತ, ಮಾರುಕಟ್ಟೆಯ ಅನಿಶ್ಚಿತತೆ ಇದಕ್ಕೆ ಕಾರಣವಾಗಿದೆ.

ಆ್ಯಪಲ್‌ನ ಮ್ಯಾಕ್‌ ಪಿಸಿಗಳ ಮಾರಾಟವು 2023ರ ದ್ವಿತೀಯಾರ್ಧದಲ್ಲಿ ಚೇತರಿಸುವ ಸಾಧ್ಯತೆ ಇದೆ. ಹೀಗಿದ್ದರೂ ಮಾರುಕಟ್ಟೆಯಲ್ಲಿ ಡೆಸ್ಕ್‌ ಟಾಪ್‌, ಲ್ಯಾಪ್‌ ಟಾಪ್‌ಗಳ ಬೇಡಿಕೆ ಕುಸಿದಿರುವುದು ಗಮನಾರ್ಹ. Tablets ಮತ್ತು Notebooks ಮಾರಾಟ ಕೂಡ ತಗ್ಗಿದೆ. ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ರಿಮೋಟ್‌ ಲರ್ನಿಂಗ್‌ ವ್ಯಾಪಕವಾಗಿ ಇದ್ದುದರಿಂದ ಇವುಗಳಿಗೆ ಬೇಡಿಕೆ ಜಾಸ್ತಿ ಇತ್ತು. ಈಗ ಶಿಕ್ಷಣ ಸಂಸ್ಥೆಗಳು ಪುನರಾರಂಭವಾಗಿರುವುದರಿಂದ ಬೇಡಿಕೆ ತಗ್ಗಿದೆ ಎಂದು ವರದಿಯಾಗಿದೆ. ಡೆಲ್‌, ಎಚ್‌ಪಿ, ಲೆನೆವೊ ಮತ್ತು ಆ್ಯಪಲ್‌ ಕಂಪನಿಗಳು ಭಾರತೀಯ ಪರ್ಸನಲ್‌ ಕಂಪ್ಯೂಟರ್‌ (PC) ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಹೊಂದಿವೆ. ಜನವರಿ-ಮಾರ್ಚ್‌ ಅವಧಿಯಲ್ಲಿ ಒಟ್ಟಾಗಿ 39 ಲಕ್ಷ ಕಂಪ್ಯೂಟರ್‌ಗಳನ್ನು ಮಾರಾಟ ಮಾಡಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 11.7% ಇಳಿಕೆ ದಾಖಲಿಸಿವೆ.

ಭಾರತದಲ್ಲಿ ಆ್ಯಪಲ್‌ ಕಂಪನಿ ತನ್ನ ಐಫೋನ್‌ಗಳ ( Apple iPhone) ಮಾರಾಟವನ್ನು ಶುರು ಮಾಡಿ 15 ವರ್ಷಗಳ ಬಳಿಕ ಮೊದಲ ರಿಟೇಲ್‌ ಸ್ಟೋರ್‌ ಅನ್ನು ಮುಂಬಯಿನಲ್ಲಿ ತೆರೆದಿದೆ. ವಿಶ್ವದ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆ್ಯಪಲ್‌ ಹಲವಾರು ಬಿಸಿನೆಸ್‌ ಸವಾಲುಗಳನ್ನು ಎದುರಿಸಿತ್ತು. ಅಮೆರಿಕ ಮೂಲದ ಆ್ಯಪಲ್‌ ಕಂಪನಿ, ಭಾರತದಲ್ಲಿ ತನ್ನ ಗುತ್ತಿಗೆ ಆಧಾರಿತ ಉತ್ಪಾದಕರ ಮೂಲಕ ಐಫೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಿದೆ.

ಆ್ಯಪಲ್‌ ಸಿಇಒ ಟಿಮ್‌ ಕುಕ್‌ (Apple CEO Tim cook) ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕಳೆದ ಬುಧವಾರ ಭೇಟಿಯಾಗಿದ್ದಾರೆ. ಹಾಗೂ ಭಾರತದ ನಾನಾ ಕಡೆಗಳಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಹಾಗೂ ವಹಿವಾಟು ವೃದ್ಧಿಸಲು ಕಂಪನಿ ಬದ್ಧವಿದೆ ಎಂದು ತಿಳಿಸಿದ್ದಾರೆ.

Exit mobile version