ಹೊಸದಿಲ್ಲಿ: ಭಾರತದಲ್ಲಿ ತನ್ನ ಐಫೋನ್‌ಗಳ ಉತ್ಪಾದನೆಯನ್ನು ಹೆಚ್ಚಿಸಲು ಆಪಲ್ ಕಂಪನಿಯ ಗುತ್ತಿಗೆದಾರರು ಬಯಸಿದ್ದಾರೆ ಎಂದು ವರದಿಯಾಗಿದೆ.
ಚೀನಾದಲ್ಲಿ ಕೋವಿಡ್ ನಿರ್ಬಂಧಗಳು ಕಠಿಣವಾಗಿರುವುದರಿಂದ ಭಾರತ ಮತ್ತು ವಿಯೆಟ್ನಾಂನ ಘಟಕಗಳಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ನಿರೀಕ್ಷಿಸಿದ್ದಾರೆ.
ಆಪಲ್‌ನ ಗುತ್ತಿಗೆದಾರರು ಚೀನಾದ ಹೊರಗೆ ಉತ್ಪಾದನೆಯನ್ನು ಹೆಚ್ಚಿಸಲು ಬಯಸಿದ್ದಾರೆ. ಇದಕ್ಕೆ ಭಾರತ ಮತ್ತು ವಿಯೆಟ್ನಾಂ ಸೂಕ್ತ ಆಯ್ಕೆಯಾಗಿದೆ ಎಂದು ನಿರ್ಧರಿಸಿದ್ದಾರೆ.
ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಅಮೆರಿಕದ ಅತಿ ದೊಡ್ಡ ಕಂಪನಿಯಾಗಿರುವ ಆಪಲ್‌ನ ಈ ನಿರ್ಧಾರವು ಇತರ ಕಂಪನಿಗಳ ಮೇಲೆಯೂ ಪ್ರಭಾವ ಬೀರುವ ನಿರೀಕ್ಷೆ ಇದೆ. ವಿಶ್ಲೇಷಕರ ಪ್ರಕಾರ ಶೇ.90ರಷ್ಟು ಐಫೋನ್, ಐಪ್ಯಾಡ್, ಮ್ಯಾಕ್ ಬುಕ್ ಚೀನಾದಲ್ಲಿ ಹೊರಗಿನ ಗುತ್ತಿಗೆದಾರರಿಂದ ತಯಾರಾಗುತ್ತವೆ. ಕಳೆದ ವರ್ಷ ಶೇ.3.1 ಐಫೋನ್ ಗಳು ಭಾರತದಲ್ಲಿ ಉತ್ಪಾದನೆಯಾಗಿತ್ತು. ಈ ವ್‌ಷ ಶೇ.೭6-7 ಕ್ಕೆ ಉತ್ಪಾದನೆ ಹೆಚ್ಚುವ ಸಾಧ್ಯತೆ ಇದೆ.
ಜನರಲ್ ಅಟ್ಲಾಂಟಿಕ್‌ನಿಂದ ಹೂಡಿಕೆ
ಜಾಗತಿಕ ಈಕ್ವಿಟಿ ಹೂಡಿಕೆ ಸಂಸ್ಥೆ ಜನರಲ್ ಅಡ್ಲಾಂಟಿಕ್ ಭಾರತದಲ್ಲಿ 2 ಶತಕೋಟಿ ಡಾಲರ್ (ಅಂದಾಜು 15,400 ಕೋಟಿ ರೂ.) ಹೂಡಿಕೆ ಮಾಡಲು ನಿರ್ಧರಿಸಿದೆ. ತಂತ್ರಜ್ಞಾ, ಹಣಕಾಸು ಸೇವೆ ರಿಟೇಲ್ ಮತ್ತು ಗ್ರಾಹಕ ವಲಯದ 15 ಕಂಪನಿಗಳ ಜತೆಗೆ ಹೂಡಿಕೆ ಮಾಡಲು ಆರಂಭಿಕ ಹಂತದ ಮಾತುಕತೆಯನ್ನು ಜನರಲ್ ಅಟ್ಲಾಂಟಿಕ್ ನಡೆಸಿದೆ ಎಂದು ಸಂಸ್ಥೆಯ ಭಾರತೀಯ ಘಟಕದ ಮುಖ್ಯಸ್ಥ ಸಂದೀಪ್ ನಾಯಕ್ ತಿಳಿಸಿದ್ದಾರೆ.
ಪ್ರೆಸ್ಟೀಜ್ ಗ್ರೂಪ್ 7,500 ಕೋಟಿ ರೂ. ಹೂಡಿಕೆ
ರಿಯಾಲ್ಟಿ ಡೆವಲಪರ್ ಪ್ರೆಸ್ಟೀಜ್ ಗ್ರೂಪ್ ಮುಂಬಯಿನ ರಿಯಲ್ ಎಸ್ಟೇಟ್ ವಲಯದಲ್ಲಿ ಮೂಂದಿನ 4-5 ವರ್ಷಗಳಲ್ಲಿ 7,500 ಕೋಟಿ ರೂ. ಬಂಡವಾಳ ಹೂಡಿಕೆಗೆ ನಿರ್ಧರಿಸಿದೆ. ದಕ್ಷಿಣ ಮುಂಬಯಿನ ನಾನಾ ಕಡೆಗಳಲ್ಲಿ ಕಂಪನಿ ತನ್ನ ಹೂಡಿಕೆ ಮಾಡಲಿದೆ.