ನವ ದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಮಂಗಳವಾರ ಹೊಸ ದಾಖಲೆಯ ೭೯.೩೮ಕ್ಕೆ ಇಳಿಕೆಯಾಗಿತ್ತು. ಇದು ಮತ್ತಷ್ಟು ಕುಸಿತ ದಾಖಲಿಸುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ.
ಜಾಗತಿಕ ಆರ್ಥಿಕತೆಯ ಮಂದಗತಿ, ವಿದೇಶಿ ಹೂಡಿಕೆದಾರರಿಂದ ಹೂಡಿಕೆಯ ಹಿಂತೆಗೆತ ಹಾಗೂ ಹೆಚ್ಚುತ್ತಿರುವ ವಿದೇಶಿ ಸಾಲದ (External debt) ಮರು ಪಾವತಿಯ ಅವಧಿ ಸಮೀಪಿಸುತ್ತಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.
ವಿದೇಶಿ ಸಾಲದ ಮರು ಪಾವತಿ
ಭಾರತ ತನ್ನ ಒಟ್ಟು ೬೨೧ ಶತಕೋಟಿ ಡಾಲರ್ (ಅಂದಾಜು ೪೮.೪೩ ಲಕ್ಷ ಕೋಟಿ ರೂ.) ವಿದೇಶಿ ಸಾಲದ ಪೈಕಿ ೪೦% ಸಾಲವನ್ನು, ಅಂದರೆ ೨೬೭ ಶತಕೋಟಿ ಡಾಲರ್ (೨೦.೮೨ ಲಕ್ಷ ಕೋಟಿ ರೂ.) ಮುಂದಿನ ೯ ತಿಂಗಳೊಳಗೆ ಮರು ಪಾವತಿ ಮಾಡಬೇಕಾಗಿದೆ ಎಂದು ಆರ್‌ಬಿಐ ಅಂಕಿ ಅಂಶಗಳು ತಿಳಿಸಿವೆ.