Site icon Vistara News

RBI Interest rate | ಕನಿಷ್ಠ 1 ಸಲ ಆರ್‌ಬಿಐ ಬಡ್ಡಿ ಏರಿಕೆ ಸಂಭವ, ಬ್ಯಾಂಕ್‌ ಠೇವಣಿ ದರ ಗರಿಷ್ಠ ನಿರೀಕ್ಷೆ

RBI

ನವ ದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಈ ವರ್ಷ ಕನಿಷ್ಠ ಒಂದು ಸಲ ತನ್ನ ರೆಪೊ ದರವನ್ನು ಏರಿಸುವ ಸಾಧ್ಯತೆ ಇದೆ. ಜತೆಗೆ ಬ್ಯಾಂಕ್‌ಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿ ದರಗಳು ಬಹುಶಃ ತಮ್ಮ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುವ (RBI Interest rate) ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಹೀಗಿದ್ದರೂ, ಕೋವಿಡ್‌ ಪೂರ್ವ ಅವಧಿಗೆ ಹೋಲಿಸಿದರೆ ಸಾಲದ ಬಡ್ಡಿ ದರ ಹಾಗೂ ಠೇವಣಿ ಬಡ್ಡಿ ದರ ಕೆಳಮಟ್ಟದಲ್ಲಿ ಇದೆ ಎಂದು ಆರ್‌ಬಿಐ ಹಣಕಾಸು ನೀತಿ ಸಮಿತಿಯ ಸದಸ್ಯ ರಾಜೀವ್‌ ರಂಜನ್‌ ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಆರ್‌ಬಿಐ ಬಡ್ಡಿ ದರ ಏರಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಬ್ಯಾಂಕ್‌ ಆಫ್‌ ಬರೋಡಾದ ಮುಖ್ಯ ಆರ್ಥಿಕ ತಜ್ಞ ಮದನ್‌ ಸಬ್ನವಿಸ್‌ ತಿಳಿಸಿದ್ದಾರೆ.

2022ರ ಡಿಸೆಂಬರ್‌ ಅಂತ್ಯದ ವೇಳೆಗೆ ಬ್ಯಾಂಕ್‌ಗಳಲ್ಲಿ ಸಾಲ ವಿತರಣೆಯ ಬೆಳವಣಿಗೆ 17.4% ಇತ್ತು. 132 ಲಕ್ಷ ಕೋಟಿ ರೂ.ಗೆ ಏರಿತ್ತು. ಒಟ್ಟು ಠೇವಣಿಗಳ ಸಂಗ್ರಹ 9.4% ಏರಿತ್ತು. 174 ಲಕ್ಷ ಕೋಟಿ ರೂ.ಗೆ ವೃದ್ಧಿಸಿತ್ತು.

Exit mobile version