ನವ ದೆಹಲಿ: ಏಷ್ಯಾ ಮತ್ತು ಪೆಸಿಫಿಕ್ ವಲಯದಲ್ಲಿ ವಾರದ ಕೆಲಸದ ಸರಾಸರಿ ಅವಧಿ (Working hours) ಸುದೀರ್ಘ ಎಂದು ಇಂಟರ್‌ನ್ಯಾಶನಲ್ ಲೇಬರ್ ಆರ್ಗನೈಸೇಶನ್ ವರದಿ ತಿಳಿಸಿದೆ.
ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತ, ಚೀನಾ ಮತ್ತು ಬ್ರೆಜಿಲ್‌ನಲ್ಲಿ ವಾರದ ಸುದೀರ್ಘ ಕೆಲಸದ ಅವಧಿಗಳು ಇರುತ್ತವೆ. ಹೋಲ್‌ಸೇಲ್ ಮತ್ತು ರಿಟೇಲ್ ಬಿಸಿನೆಸ್ ವಲಯದಲ್ಲಿ ವಾರದ ಕೆಲಸದ ಗಂಟೆಗಳು ಅತಿ ಹೆಚ್ಚಾಗಿರುತ್ತದೆ (49.1 ಗಂಟೆಗಳು) ಸಾರಿಗೆ ಮತ್ತು ಸಂಪರ್ಕದಲ್ಲಿ 48.2 ಗಂಟೆಗಳು, ಉತ್ಪಾದನೆಯಲ್ಲಿ 47.6 ಗಂಟೆಗಳ ಕಾಲ ಪ್ರತಿ ವಾರ ಸರಾಸರಿ ಕೆಲಸದ ಅವಧಿ ಇರುತ್ತದೆ. ಕೃಷಿಯಲ್ಲಿ ಅತಿ ಕಡಿಮೆ ಎಂದರೆ 37.9 ಗಂಟೆಗಳ ಅವಧಿಯ ಕೆಲಸ ಇರುತ್ತದೆ. ಶಿಕ್ಷಣ ವಲಯದಲ್ಲಿ 39.3 ಗಂಟೆಗಳು, ಆರೋಗ್ಯ ವಲಯದಲ್ಲಿ 39.8 ಗಂಟೆಗಳ ಸರಾಸರಿ ಅವಧಿ ಇರುತ್ತದೆ ಎಂದು ವರದಿ ತಿಳಿಸಿದೆ.
ಉತ್ತರ ಅಮೆರಿಕ, ಯುರೋಪ್‌ನಲ್ಲಿ ವಾರದ ಸರಾಸರಿ ಕೆಲಸದ ಅವಧಿ ಅಲ್ಪ ಎಂದು ವರದಿ ತಿಳಿಸಿದೆ.