Site icon Vistara News

Axis Bank | ಎಕ್ಸಿಸ್‌ ಬ್ಯಾಂಕ್‌ ಸಾಲದ ಬಡ್ಡಿ ದರದಲ್ಲಿ 0.25% ಹೆಚ್ಚಳ, ಸಾಲಗಾರಿಗೆ ಇಎಂಐ ಏರಿಕೆಯ ಬರೆ

axis bank

ನವ ದೆಹಲಿ: ಎಕ್ಸಿಸ್‌ ಬ್ಯಾಂಕ್‌ ( Axis Bank) ತನ್ನ ಎಂಸಿಎಲ್‌ಆರ್‌ ಆಧರಿತ ಸಾಲಗಳ ಮೇಲಿನ ಬಡ್ಡಿ ದರದಲ್ಲಿ 0.25% ಏರಿಕೆ ಮಾಡಿದೆ. ಪರಿಷ್ಕೃತ ದರ 2022ರ ಅಕ್ಟೋಬರ್‌ 18ರಿಂದ ಜಾರಿಯಾಗಿದೆ.

ಇದರ ಪರಿಣಾಮ ಎಕ್ಸಿಸ್‌ ಬ್ಯಾಂಕಿನಲ್ಲಿ ಎಂಸಿಎಲ್‌ಆರ್‌ (Marginal cost of funds based lending rate) ಆಧರಿತ ನಾನಾ ಸಾಲಗಳ ಬಡ್ಡಿ ದರಗಳಲ್ಲಿ ಏರಿಕೆಯಾಗಲಿದೆ.

ಎಕ್ಸಿಸ್‌ ಬ್ಯಾಂಕ್‌ ವೆಬ್‌ ಸೈಟ್‌ ಪ್ರಕಾರ ಒಂದು ತಿಂಗಳು ಅವಧಿಯ ಎಂಸಿಎಲ್‌ಆರ್‌ ದರ 8.15, ಮೂರು ತಿಂಗಳಿಗೆ 8.25%, 6 ತಿಂಗಳಿಗೆ 8.30%, ಒಂದು ವರ್ಷಕ್ಕೆ 8.35%, 2 ವರ್ಷಗಳಿಗೆ 8.45%, 3 ವರ್ಷಕ್ಕೆ 8.50% ಬಡ್ಡಿ ದರ ನಿಗದಿಯಾಗಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಪಿಎನ್‌ಬಿ ತಮ್ಮ ಎಂಸಿಎಲ್‌ಆರ್‌ ದರವನ್ನು ಏರಿಸಿವೆ.

Exit mobile version