ನವ ದೆಹಲಿ: ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್ 1 ವರ್ಷ ಅವಧಿಯ 1,198 ರೂ. ದರದ ಪ್ರಿ-ಪೇಯ್ಡ್ ರಿಚಾರ್ಜ್ ಪ್ಲಾನ್ ( BSNL) ಅನ್ನು ಬಿಡುಗಡೆಗೊಳಿಸಿದೆ.
ಬಿಎಸ್ಸೆನ್ನೆಲ್ 439 ರೂ.ಗಳ ಮತ್ತೊಂದು ಪ್ಲಾನ್ ಅನ್ನೂ ಬಿಡುಗಡೆಗೊಳಿಸಿದೆ. ಈ ಎರಡೂ ಪ್ಲಾನ್‌ಗಳಲ್ಲಿ ಬಳಕೆದಾರರಿಗೆ ಏನೇನು ಸೌಲಭ್ಯ ದೊರೆಯಲಿದೆ ಎಂಬುದನ್ನು ನೋಡೋಣ.
ಬಿಎಸ್ಸೆನ್ನೆಲ್ ದೀಪಾವಳಿ ಕೊಡುಗೆ 2022 ಅನ್ನು ಬಿಡುಗಡೆಗೊಳಿಸಿದ್ದು, 1198 ರೂ. ಮತ್ತು 439 ರೂ.ಗೆ ಲಭ್ಯವಿದೆ. 1198 ರೂ. ಪ್ಲಾನ್ ಒಂದು ವರ್ಷದ ಅವಧಿ ಹಾಗೂ 439 ರೂ. ಮೂರು ತಿಂಗಳಿನ ಅವಧಿಯದ್ದಾಗಿದೆ. ಹೆಚ್ಚುವರಿಯಾಗಿ ಎರಡು ಮನರಂಜನೆ ಮತ್ತು ಗೇಮಿಂಗ್ ವೋಚರ್ ಅನ್ನೂ ಬಿಡಗಡೆಗೊಳಿಸಿದೆ. ಇದರ ದರ 269 ರೂ. ಮತ್ತು 769 ರೂ. ಆಗಿದೆ.
1198 ರೂ. ಪ್ಲಾನ್‌ನಲ್ಲಿ ಬಳಕೆದಾರರು 365 ದಿನ ಬಳಸಬಹುದು. ಪ್ರತಿ ತಿಂಗಳು 3ಜಿಬಿ ಡೇಟಾ, 300 ನಿಮಿಷಗಳ ಕರೆ, 30 ಎಸ್ಸೆನ್ನೆಸ್ ಸಿಗಲಿದೆ. ಪ್ರತಿ ತಿಂಗಳು ಇದು ನವೀಕರಣವಾಗುತ್ತದೆ. ಬಳಕೆ ಆಗದಿದ್ದರೆ ಮುಂದಿನ ತಿಂಗಳಿಗೆ ಮುಂದುವರಿಯುವುದಿಲ್ಲ.
ಬಿಎಸ್ಸೆನ್ನೆಲ್‌ನ 439 ರೂ. ಪ್ಲಾನ್ ಅಡಿಯಲ್ಲಿ 90 ದಿನಗಳ ವ್ಯಾಲಿಡಿಟಿ ಇರುತ್ತದೆ. ಅಮಿತ ಕರೆಗಳನ್ನು ಮಾಡಬಹುದು. 300 ಎಸ್ಸೆಮ್ಮೆಸ್ ಮೂರು ತಿಂಗಳಿಗೆ ಲಭ್ಯವಿದೆ.