ನವದೆಹಲಿ: ಕೇಂದ್ರ ಸರಕಾರ 5G ಸ್ಪೆಕ್ಟ್ರಮ್ ಹರಾಜಿಗೆ ಅನುಮತಿ ನೀಡಿದ್ದು, ಬೆಂಗಳೂರು ಸೇರಿದಂತೆ 13 ನಗರಗಳಲ್ಲಿ ಮೊದಲ ಬಾರಿಗೆ 5G ಸೇವೆ ಸಿಗಲಿದೆ.
ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ನವದೆಹಲಿ, ಗಾಂಧಿನಗರ, ಗುರ್‌ಗಾಂವ್, ಹೈದರಾಬಾದ್, ಜಾಮ್‌ನಗರ್, ಕೋಲ್ಕೊತಾ, ಲಖನೌ, ಮುಂಬಯಿ ಮತ್ತು ಪುಣೆಯಲ್ಲಿ ಮೊದಲು 5G ನೆಟ್ ವರ್ಕ್ ಸೌಲಭ್ಯ ಸಿಗಲಿದೆ.
ಹೊಸ ಯುಗಾರಂಭ
5G ಸ್ಪೆಕ್ಟ್ರಮ್ ಹರಾಜಿಗೆ ಅನುಮತಿ ನೀಡುವುದರೊಂದಿಗೆ ಭಾರತದ ಟೆಲಿಕಾಂ ವಲಯದಲ್ಲಿ ಹೊಸ ಯುಗಾರಂಭ ಆದಂತಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸರಕಾರದ ಪ್ರಕಾರ 5G ಸೇವೆಯು 4Gಗಿಂತ 10 ಪಟ್ಟು ವೇಗವನ್ನು ಹೊಂದಿರಲಿದೆ. ಇಂಟರ್‌ನೆಟ್ ಸ್ಪೀಡ್ ಹೆಚ್ಚುವುದರಿಂದ ಹಲವಾರು ಪ್ರಯೋಜನಗಳು ಸಿಗಲಿವೆ. ಆರೋಗ್ಯ, ಶಿಕ್ಷಣ, ಕೃಷಿ, ಸೇವೆ, ಬ್ಯಾಂಕಿಂಗ್, ಇ-ಕಾಮರ್ಸ್, ಐಟಿ ಮೊದಲಾದ ವಲಯಗಳಲ್ಲಿ ವಹಿವಾಟು ಹೆಚ್ಚಲಿದೆ.
ದೂರಸಂಪರ್ಕ ಇಲಾಖೆ ಈಗಾಗಲೇ ಎಂಟು ಏಜೆನ್ಸಿಗಳ ಜತೆಗೆ 5G ಟೆಸ್ಟ್ ಬೆಡ್ ಪ್ರಾಜೆಕ್ಟ್ ಅನ್ನು 2018ರಲ್ಲಿ ಆರಂಭಿಸಿತ್ತು. ಐಐಟಿಗಳು, ಬೆಂಗಳೂರಿನ ಐಐಎಸ್ಸಿ ಇದರಲ್ಲಿ ಭಾಗವಹಿಸಿವೆ.
ಇದನ್ನೂ ಓದಿ:GOOD NEWS: ಜುಲೈ ಅಂತ್ಯದೊಳಗೆ 5G ಸ್ಪೆಕ್ಟ್ರಮ್ ಹರಾಜಿಗೆ ಸಿದ್ಧತೆ, ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್