ಉದ್ಯೋಗಿಗಳ ನಿವೃತ್ತಿನಿಧಿ ಮಂಡಳಿ ಇಪಿಎಫ್‌ಒ ಪಿಎಫ್ ಸದಸ್ಯರಿಗೆ, ಆನ್‌ಲೈನ್ ಮೂಲಕ ವಂಚಿಸುವ ದುಷ್ಕರ್ಮಿಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಇಪಿಎಫ್‌ಒ ಪಿಎಫ್ ಸದಸ್ಯರು ಆನ್‌ಲೈನ್ ಮಾಧ್ಯಮಗಳ ಮೂಲಕ ವಂಚಿಸಲು ಯತ್ನಿಸುತ್ತಾರೆ. ಆದ್ದರಿಂದ ವಾಟ್ಸ್ ಆ್ಯಪ್ ಮತ್ತು ಸಾಮಾಜಿಕ ಜಾಲತಾಣದ ಮೂಲಕ (ವಿಸ್ತಾರ Money Guide | EPFO Alert |) ಯಾವುದೇ ಹಣವನ್ನು ಪಿಎಫ್ ಹೆಸರಿನಲ್ಲಿ ಠೇವಣಿ ಇಡುವುದು ಬೇಡ ಎಂದು ಎಚ್ಚರಿಸಿದೆ.
ವಾಟ್ಸ್ ಆ್ಯಪ್ ಮೂಲಕ ಇಪಿಎಫ್‌ಒ ಬ್ಯಾಂಕ್ ಖಾತೆ ವಿವರ ಕೇಳುವುದಿಲ್ಲ
ಇಪಿಎಫ್‌ಒ (Employees Provident Fund organisation-EPFO) ಯಾವತ್ತೂ ಆಧಾರ್, ಪ್ಯಾನ್, ಯುಎಎನ್, ಬ್ಯಾಂಕ್ ಖಾತೆ, ಒಟಿಪಿ ಇತ್ಯಾದಿಗಳನ್ನು ಫೋನ್, ಸಾಮಾಜಿಕ ಜಾಲತಾಣ, ವಾಟ್ಸ್ ಆ್ಯಪ್ ಮೂಲಕ ಕೇಳುವುದಿಲ್ಲ.
ಯಾರಾದರೂ ಫೋನ್ ಅಥವಾ ವಾಟ್ಸ್ ಆ್ಯಪ್ ಮೂಲಕ ಮೇಲ್ಕಂಡ ವಿವರಗಳನ್ನು ಕೇಳಿದರೆ, ವಿವರಗಳನ್ನು ಕೊಡುವುದು ಬೇಡ ಎಂದು ಇಪಿಎಫ್‌ಒ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದೆ.
ಇಪಿಎಫ್‌ಒ ಸಂಘಟಿತ ವಲಯದ ಉದ್ಯೋಗಿಗಳಿಗೆ Employees provident funds & miscellaneous provisions act, 1952 ಅಡಿಯಲ್ಲಿ ಪಿಎಫ್ ಸೌಲಭ್ಯವನ್ನು ನೀಡುತ್ತದೆ. ಕಳೆದ ಸೆಪ್ಟೆಂಬರ್‌ನಲ್ಲಿ ಮಾಸಿಕ ನಿವ್ವಳ ನೇಮಕಾತಿ 21.85% ಏರಿಕೆಯಾಗಿತ್ತು. 2861 ಹೊಸ ಕಂಪನಿಗಳು ಮತ್ತು ಸಂಸ್ಥೆಗಳು ಇಪಿಎಫ್‌ಒಗೆ ಸೇರ್ಪಡೆಯಾಗಿವೆ.