Site icon Vistara News

Bank account : ಕೆವೈಸಿ ಸರಿಯಾಗದೆ ಬ್ಯಾಂಕ್‌ ಖಾತೆ ನಿಷ್ಕ್ರಿಯವಾದರೆ ಸಕ್ರಿಯಗೊಳಿಸೋದು ಹೇಗೆ?

cash note

ಬ್ಯಾಂಕ್‌ ಅಕೌಂಟ್‌ ಕುರಿತ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಸಂದರ್ಭ ನಿಮಗೆ ಬಂದಿರಬಹುದು. ಏಕೆಂದರೆ ಆರ್‌ಬಿಐ ನಿರ್ದೇಶನದ ಅನುಸಾರ ಮರು ಕೆವೈಸಿ (KYC) ಮಾಡಬೇಕಿರುತ್ತದೆ. ರಿ-ಕೆವೈಸಿ ಆಗದಿದ್ದರೆ ಬ್ಯಾಂಕ್‌ ಖಾತೆಯನ್ನು ಬ್ಯಾಂಕ್‌ ನಿಷ್ಕ್ರಿಯಗೊಳಿಸಬಹುದು. ಅದು ಬ್ಯಾಂಕ್‌ಗಳಿಗೆ ಕಡ್ಡಾಯವೂ ಆಗಿದೆ. ಆದರೆ ಇದಕ್ಕೆ ಚಿಂತೆ ಮಾಡಬೇಕಿಲ್ಲ.

ಬ್ಯಾಂಕ್‌ಗಳು ನಿಯಮಿತವಾಗಿ ರಿ-ಕೆವೈಸಿ ಮಾಡುವುದಿದ್ದರೂ, ಯಾವ ಕೆಟಗರಿಯ ಗ್ರಾಹಕರು ಎಂಬುದನ್ನು ಅವಲಂಬಿಸಿ ಇರುತ್ತದೆ. ರೆಗ್ಯುಲೇಟೆಡ್‌ ಎಂಟಿಟೀಸ್‌ (Regulated entities) ರಿಸ್ಕ್‌ ಆಧರಿತ ನಿಯಮಿತ ರಿ-ಕೆವೈಸಿ ಪ್ರಕ್ರಿಯೆ ಮಾಡುತ್ತವೆ. ಹೈ -ರಿಸ್ಕ್‌ ಕೆಟಗರಿಯ ಗ್ರಾಹಕರಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಕಡಿಮೆ ರಿಸ್ಕ್‌ ಇರುವ ಗ್ರಾಹಕರಿಗೆ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುತ್ತದೆ. ಮಧ್ಯಮ ರಿಸ್ಕ್‌ ಇರುವ ಗ್ರಾಹಕರಿಗೆ ಪ್ರತಿ ಎಂಟು ವರ್ಷಕ್ಕೊಮ್ಮೆ ಕೆವೈಸಿ ನಡೆಯುತ್ತದೆ.

ನಿಮ್ಮ ಬ್ಯಾಂಕ್‌ ಇ-ಮೇಲ್‌ ಮೂಲಕ ನಿಮಗೆ ಕೆವೈಸಿ ಡಿಟೇಲ್ಸ್‌ ಪರಿಷ್ಕರಿಸುವಂತೆ ಕೋರಿದ್ದರೆ, ಆದ್ಯತೆಯ ಮೇರೆಗೆ ಪೂರ್ಣಗೊಳಿಸಿ. ಡೆಡ್‌ ಲೈನ್‌ ಮಿಸ್‌ ಆದರೆ ಬ್ಯಾಂಕ್‌ ಖಾತೆ ನಿಷ್ಕ್ರಿಯವಾಗಬಹುದು. ಒಂದು ವೇಳೆ ರಿ-ಕೆವೈಸಿ ವಿಫಲವಾಗಿ ಬ್ಯಾಂಕ್‌ ಅಕೌಂಟ್‌ ಸಸ್ಪೆಂಡ್‌ ಆಗಿದ್ದರೆ, ರಿ-ಆಕ್ಟಿವ್‌ ಮಾಡಬಹುದು. ಬ್ಯಾಂಕ್‌ ಖಾತೆಯನ್ನು ರಿ-ಆಕ್ಟಿವ್‌ ಮಾಡುವ ಪ್ರಕ್ರಿಯೆ ಪ್ರತಿಯೊಂದು ಬ್ಯಾಂಕಿಗೂ ಒಂದೇ ರೀತಿಯಲ್ಲಿರುತ್ತದೆ. ಹೀಗಿದ್ದರೂ ಮೆಕಾನಿಸಂ ಭಿನ್ನವಾಗಿರಬಹುದು (ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಬ್ಯಾಂಕಿಂಗ್‌, ಎಸ್ಸೆಮ್ಮೆಸ್‌, ಇ-ಮೇಲ್‌ ಇತ್ಯಾದಿ.)

ಬ್ಯಾಂಕ್‌ ಆಫ್‌ ಬರೋಡಾದಲ್ಲಿ (Bank of Baroda) ವೆಬ್‌ ಸೈಟ್‌ ಪ್ರಕಾರ, ಗ್ರಾಹಕರು ಮೂರು ವಿಧಾನಗಳಲ್ಲಿ ರಿ-ಕೆವೈಸಿ (Re-KYC) ಮಾಡಬಹುದು. ಹಾಗೂ ಬ್ಯಾಂಕ್‌ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಬಹುದು.

ಬ್ಯಾಂಕ್‌ ಶಾಖೆಗೆ ಭೇಟಿ: ನಿಮ್ಮ ಸಮೀಪದ ಬ್ಯಾಂಕ್‌ ಶಾಖೆಗೆ ಭೇಟಿ ನೀಡಿ ರಿ-ಕೆವೈಸಿ ಫಾರಮ್‌ ಭರ್ತಿಗೊಳಿಸಿ. ಕೆವೈಸಿ ದಾಖಲೆ ಸಲ್ಲಿಸಿ.

ವಿಡಿಯೊ ಕಾಲ್:‌ ಆಧಾರ್‌, ಪ್ಯಾನ್‌ ಇರುವವರು ವಿಡಿಯೊ ರಿ-ಕೆವೈಸಿ ಮಾಡಬಹುದು.

ಇಮೇಲ್/ಪೋಸ್ಟ್/‌ ಕೊರಿಯರ್:‌ ಇ-ಮೇಲ್‌, ಕೊರಿಯರ್‌, ಪೋಸ್ಟ್‌ ಇತ್ಯಾದಿ ಮೂಲಕವೂ ಸೆಲ್ಫ್‌ ಡಿಕ್ಲರೇಷನ್‌ ಮೂಲಕ ರಿ-ಕೆವೈಸಿ ಮಾಡಬಹುದು.

ಕೋಟಕ್‌ ಮಹೀಂದ್ರಾ ಬ್ಯಾಂಕ್‌ ಗ್ರಾಹಕರು ತಮ್ಮ ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಶನ್‌ ಬಳಸಿ (Mobile banking app) ಕೆವೈಸಿ ಪರಿಷ್ಕರಿಸಬಹುದು.

ಸೌತ್ ಇಂಡಿಯನ್‌ ಬ್ಯಾಂಕಿನ್‌ ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಯ ರಿ ಕೆವೈಸಿಯನ್ನು ಬ್ಯಾಂಕ್‌ ಕಚೇರಿಗೆ, ಶಾಖೆಗಳಿಗೆ ತೆರಳಿ ಮಾಡಬಹುದು ಎಂದು ಬ್ಯಕಿನ ಪ್ರಧಾನ ವ್ಯವಸ್ಥಾಪಕ ಶಿವರಾಮನ್‌ ತಿಳಿಸಿದ್ದಾರೆ. ಸಮೀಪದ ಎಸ್‌ಐಬಿ ಕಚೃಿಗೆ ತೆರಳಿ ಇತ್ತೀಚಿನ ಫೋಟೊ, ಪ್ಯಾನ್‌ ಇತ್ಯಾದಿ ದಾಖಲೆ ಸಲ್ಲಿಸಬಹುದು.

Exit mobile version