ಮುಂಬಯಿ: ಗ್ರಾಹಕರ ನಿಷ್ಕ್ರಿಯ ಖಾತೆಗಳಲ್ಲಿ (Dormant account) ಇರುವ 50,000 ಕೋಟಿ ರೂ. ಮೊತ್ತವನ್ನು ನಗದು ಮೀಸಲು ಅನುಪಾತಕ್ಕೆ (Cash reserve ratio-CRR) ಪರಿಗಣಿಸುವಂತೆ ಬ್ಯಾಂಕ್‌ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಸಲಹೆ ನೀಡಿದೆ. ನಿಷ್ಕ್ರಿಯ ಖಾತೆಗಳಲ್ಲಿ ಸುಮಾರು 50,000 ಕೋಟಿ ರೂ.ಗಳು ಇದ್ದು, ಇದನ್ನು ಸಿಆರ್‌ಆರ್‌ಗೆ ಪರಿಗಣಿಸಿದರೆ ಅನುಕೂಲವಾಗುತ್ತದೆ ಎಂದು ಬ್ಯಾಂಕ್‌ಗಳು ಆರ್‌ಬಿಐಗೆ ಸಲಹೆ ನೀಡಿವೆ. ಪ್ರಸ್ತುತ ಸಿಆರ್‌ಆರ್ 4.50% ಇದೆ.
ಏನಿದು ನಗದು ಮೀಸಲು ಅನುಪಾತ? (cash reserve ratio)? : ನಗದು ಮೀಸಲು ಅನುಪಾತ ಎಂದರೆ ಬ್ಯಾಂಕ್‌ಗಳು ತಮ್ಮ ವಹಿವಾಟು ನಡೆಸಲು ಆರ್‌ಬಿಐನಲ್ಲಿ ಇಡಬೇಕಾದ ಭದ್ರತಾ ಠೇವಣಿಯ ಮೊತ್ತ. ಈ ಹಣವನ್ನು ಬ್ಯಾಂಕ್‌ಗಳು ಸಾಲ ವಿತರಣೆಗೆ ಅಥವಾ ತಮ್ಮ ಚಟುವಟಿಕೆಗಳ ವಿಸ್ತರಣೆಗೆ ಬಳಸಕೂಡದು. ಇದಕ್ಕೆ ಆರ್‌ಬಿಐನಿಂದ ಯಾವುದೇ ಬಡ್ಡಿ ಸಿಗುವುದಿಲ್ಲ. ಎಲ್ಲ ವರ್ಗೀಕೃತ ಕಮರ್ಶಿಯಲ್ ಬ್ಯಾಂಕ್‌ಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಆದರೆ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ (NBFC) ಇದು ಅನ್ವಯವಾಗುವುದಿಲ್ಲ.
ಸಿಆರ್‌ಆರ್ ಲೆಕ್ಕ ಹೇಗೆ? ಈಗ ಒಂದು ಉದಾಹರಣೆ ನೋಡೋಣ. ಸಿಆರ್‌ಆರ್ 6% ಇದೆ ಎಂದಿಟ್ಟುಕೊಳ್ಳಿ. ಬ್ಯಾಂಕ್ ತನ್ನ ಠೇವಣಿಗಳಲ್ಲಿ 100 ರೂ.ಗೆ 6 ರೂ.ಗಳನ್ನು ಸಿಆರ್‌ಆರ್‌ಗೆ ಕೊಡಬೇಕಾಗುತ್ತದೆ. ಸಿಆರ್‌ಆರ್ ಹಣದುಬ್ಬರವನ್ನು ಹತ್ತಿಕ್ಕಲು ಸಹಕರಿಸುತ್ತದೆ. ವ್ಯವಸ್ಥೆಯಿಂದ ಹಣವನ್ನು ಹೀರಿಕೊಳ್ಳಲು ಆರ್‌ಬಿಐ ಸಿಆರ್‌ಆರ್ ಅನ್ನು ಹೆಚ್ಚಿಸುತ್ತದೆ. ಹಾಗೆಯೇ ಬೇಡಿಕೆಯ ಸಂದರ್ಭದಲ್ಲಿ ಸಿಆರ್‌ಆರ್ ಅನ್ನು ಕಡಿಮೆ ಮಾಡುವ ಮೂಲಕ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಇರುವಂತೆ ನೋಡಿಕೊಳ್ಳಲು ಕೂಡ ಸಹಾಯಕವಾಗುತ್ತದೆ.
ನಿಷ್ಕ್ರಿಯ ಖಾತೆ ಎಂದರೇನು? ಬ್ಯಾಂಕ್‌ಗಳಲ್ಲಿ ಎರಡು ವರ್ಷಗಳ ಕಾಲ ಉಳಿತಾಯ ಅಥವಾ ಕರೆಂಟ್ ಅಕೌಂಟ್‌ನಲ್ಲಿ ಯಾವುದೇ ವರ್ಗಾವಣೆ (transactions) ನಡೆಯದಿದ್ದರೆ, ಅದನ್ನು ನಿಷ್ಕ್ರಿಯ ಖಾತೆ ಎನ್ನುತ್ತಾರೆ. ನಿಷ್ಕ್ರಿಯ ಖಾತೆ
ಬ್ಯಾಂಕ್ ಶಾಖೆಗೆ ತೆರಳಿ ನಿಷ್ಕ್ರಿಯ ಖಾತೆಯನ್ನು ಸಕ್ರಿಯಗೊಳಿಸಲು ಅರ್ಜಿ ಸಲ್ಲಿಸಬಹುದು. ಯಾವುದಾದರೂ ಹಣಕಾಸು ವರ್ಗಾವಣೆ ಮಾಡುವ ಮೂಲಕವೂ ಸಕ್ರಿಯಗೊಳಿಸಬಹುದು. ಯಾವುದೇ ಅವ್ಯವಹಾರ ಆಗದಂತೆ ನೋಡಿಕೊಳ್ಳಲು ಬ್ಯಾಂಕ್‌ಗಳು ನಿಷ್ಕ್ರಿಯ ಖಾತೆಗಳು ಎಂದು ಪರಿಗಣಿಸುತ್ತವೆ. ನಿಷ್ಕ್ರಿಯ ಖಾತೆ ಎನ್ನಿಸಿದ್ದರೂ, ಬ್ಯಾಂಕ್‌ಗಳು ಉಳಿತಾಯ ಖಾತೆಯಲ್ಲಿರುವ ಠೇವಣಿಗೆ ಬಡ್ಡಿ ನೀಡುತ್ತವೆ.
ಪ್ಯಾನ್- ಆಧಾರ್ ಲಿಂಕ್ ಮಾಡದಿದ್ದರೆ ನಿಷ್ಕ್ರಿಯ
2023ರ ಏಪ್ರಿಲ್ 1ರ ಒಳಗೆ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯ ಎಂದು ಪರಿಗಣನೆಯಾಗುತ್ತದೆ. ದೇಶದಲ್ಲಿ ಬಹುತೇಕ ಪ್ಯಾನ್ ಕಾರ್ಡ್‌ದಾರರು ಈಗಾಗಲೇ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜತೆಗೆ ಲಿಂಕ್ ಮಾಡಿದ್ದಾರೆ. ಒಂದು ವೇಳೆ ಲಿಂಕ್ ಮಾಡದಿದ್ದರೆ ಏಪ್ರಿಲ್ 1ರ ಒಳಗೆ ಮಾಡುವುದು ಸೂಕ್ತ.
ಆದಾಯ ತೆರಿಗೆ ಕಾಯಿದೆ 1961 ಪ್ರಕಾರ ಎಲ್ಲ ಪ್ಯಾನ್ ಕಾರ್ಡ್‌ದಾರರು (ವಿನಾಯಿತಿಗೆ ಒಳಪಡದವರು) 2023 ಏಪ್ರಿಲ್ 31ರೊಳಗೆ ಆಧಾರ್ ಜತೆಗೆ ಲಿಂಕ್ ಮಾಡಬೇಕು.