ನವ ದೆಹಲಿ: ಭಾರತದಲ್ಲಿ ಬಡ್ಡಿ ದರ ಏರಿಕೆಯ ಹೊರತಾಗಿಯೂ ಪ್ರಸ್ತಕ್ತ ಸಾಲಿನಲ್ಲಿ ಬ್ಯಾಂಕ್‌ಗಳಲ್ಲಿ ಸಾಲ ವಿತರಣೆ ಹೆಚ್ಚಳವಾಗಲಿದೆ ಎಂದು (Bank loan growth) ಫಿಚ್ ರೇಟಿಂಗ್ಸ್ ಸೋಮವಾರ ತಿಳಿಸಿದೆ.
ಸಾಲ ವಿತರಣೆಯ ಹೆಚ್ಚಳದ ಪರಿಣಾಮ ಬ್ಯಾಂಕ್‌ಗಳ ಬಡ್ಡಿ ಆದಾಯ ವೃದ್ಧಿಸಲಿದೆ. ಪ್ರಸಕ್ತ ಸಾಲಿನಲ್ಲಿ ಸಾಲ ವಿತರಣೆ 13% ಏರಿಕೆಯಾಗಿದೆ. 2021-22ರಲ್ಲಿ 11.5%ರಷ್ಟು ವಿತರಣೆಯಾಗಿತ್ತು. ಆರ್ಥಿಕ ಚಟುವಟಿಕೆಗಳು ಸುಧಾರಣೆಯಾಗಿರುವ ಹಿನ್ನೆಲೆಯಲ್ಲಿ ಸಾಲ ವಿತರಣೆಯಲ್ಲೂ ಹೆಚ್ಚಳವಾಗಿದೆ ಎಂದು ಫಿಚ್ ತಿಳಿಸಿದೆ.
2022-23ರಲ್ಲಿ ಜಿಡಿಪಿ ಬೆಳವಣಿಗೆ 7% ಇರಬಹುದು ಎಂದು ಫಿಚ್ ಅಂದಾಜಿಸಿದೆ. ಸಾಲಕ್ಕೆ ಬೇಡಿಕೆ ಬಂದಿರುವುದರಿಂದ ಠೇವಣಿಗಳಿಗೂ ಬೇಡಿಕೆ ವೃದ್ಧಿಸಬಹುದು. ಹೀಗಾಗಿ ಠೇವಣಿಗಳ ಬಡ್ಡಿ ದರ ಕೂಡ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.