Site icon Vistara News

Bankruptcy cases :‌ ದೇಶದಲ್ಲಿ ದಿವಾಳಿ ಕೇಸ್‌ಗಳು 25% ಹೆಚ್ಚಳ, ಸಾಲದ ರಿಕವರಿ 30%ಕ್ಕೆ ಇಳಿಕೆ

cash

ನವ ದೆಹಲಿ: ಕಳೆದ 2022ರ ಅಕ್ಟೋಬರ್-ಡಿಸೆಂಬರ್‌ ತ್ರೈಮಾಸಿಕದಲ್ಲಿ ದಿವಾಳಿ ಪ್ರಕರಣಗಳ ಸಂಖ್ಯೆಯಲ್ಲಿ 25% ಹೆಚ್ಚಳವಾಗಿದೆ. ಸಾಲದ ಮರು ವಸೂಲಾತಿ 23.45% ಇಳಿಕೆಯಾಗಿದೆ. ಒಟ್ಟಾರೆ ಸಾಲದ ರಿಕವರಿ 30.5%ಕ್ಕೆ ಇಳಿಕೆಯಾಗಿದೆ ಎಂದು ಕೇರ್‌ ರೇಟಿಂಗ್ಸ್‌ ತಿಳಿಸಿದೆ. ದೊಡ್ಡ ಮೊತ್ತದ ಬಹುತೇಕ (Bankruptcy cases) ದಿವಾಳಿ ಕೇಸ್‌ಗಳು ಇತ್ಯರ್ಥವಾಗಿದೆ. ಆದರೆ ಸಣ್ಣ ಮತ್ತು ಮಧ್ಯಮ ಮೌಲ್ಯದ ಕೇಸ್‌ಗಳು ಬಾಕಿ ಇವೆ ಎಂದು ಸಮೀಕ್ಷೆ ತಿಳಿಸಿದೆ.

2016ರಲ್ಲಿ ದಿವಾಳಿ ಪ್ರಕ್ರಿಯೆ ಕುರಿತ Insalvency and bankrupty code ಅಸ್ತಿತ್ವಕ್ಕೆ ಬಂದ ಬಳಿಕ ದಿವಾಳಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆ ಪ್ರತಿ ತಿಂಗಳು ಹೆಚ್ಚುತ್ತಿದೆ. 2022ರ ಡಿಸೆಂಬರ್‌ ತನಕ 6,200 ಕೇಸ್‌ಗಳು ದಾಖಳಾಗಿವೆ. ಇವುಗಳಲ್ಲಿ 2,692 ಪ್ರಕರಣಗಳನ್ನು ಹಣಕಾಸು ಸಂಸ್ಥೆಗಳು ದಾಖಲಿಸಿವೆ. 3,133 ಅರ್ಜಿಗಳನ್ನುಕಂಪನಿಗಳೇ ಸಲ್ಲಿಸಿವೆ.

ದಿವಾಳಿ ಪ್ರಕರಣಗಳಲ್ಲಿ ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳು 8,30,842 ಕೋಟಿ ರೂ.ಗಳನ್ನು ಸಂಗ್ರಹಿಸಿವೆ. ಉತ್ಪಾದನಾ ವಲಯದ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿವೆ.

Exit mobile version