Site icon Vistara News

Twitter office | ಟ್ವಿಟರ್‌ ಕಚೇರಿಯಲ್ಲಿ ಉದ್ಯೋಗಿಗಳಿಗೆ ಹಾಸಿಗೆ, ವಾರ್ಡ್‌ರೋಬ್‌, ವಾಷಿಂಗ್‌ಮೆಷೀನ್

twitter

ನ್ಯೂಯಾರ್ಕ್:‌ ಟ್ವಿಟರ್‌ ಮುಖ್ಯಸ್ಥ ಎಲಾನ್‌ ಮಸ್ಕ್‌ ಅವರು ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಕಚೇರಿಯಲ್ಲಿ ( Twitter office) ಕಠಿಣ ಪರಿಶ್ರಮಿ ಉದ್ಯೋಗಿಗಳಿಗೆ ವಿಶ್ರಮಿಸಲು ಬೆಡ್‌ ರೂಮ್‌ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ.

ಕಚೇರಿಯಲ್ಲಿನ ಈ ಬೆಡ್‌ರೂಮ್‌ನಲ್ಲಿ ಹಾಸಿಗೆ, ಸೋಫಾ, ವಾರ್ಡ್‌ರೋಬ್‌, ಟೇಬಲ್‌ ಲ್ಯಾಂಪ್‌, ವಾಷಿಂಗ್‌ಮೆಶೀನ್‌ ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಟ್ವಿಟರ್‌ನ ಈ ಕಚೇರಿ ವ್ಯವಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಎಲಾನ್‌ ಮಸ್ಕ್‌ ಅವರ ಕಠಿಣ ಪರಿಶ್ರಮಿ ಕೆಲಸದ ಸಂಸ್ಕೃತಿಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅನೇಕ ಉದ್ಯೋಗಿಗಳು ಕಚೇರಿಯಲ್ಲಿ ಸುದೀರ್ಘ ಕಾಲ ಕೆಲಸ ಮಾಡುವ ಅಗತ್ಯ ಸೃಷ್ಟಿಯಾಗಿದ್ದು, ದಣಿವು ನೀಗಿಸಲು ಬೆಡ್‌ ರೂಮ್‌ ವ್ಯವಸ್ಥೆಯನ್ನೂ ಒದಗಿಸಲಾಗಿದೆ.

Exit mobile version