ವಿದ್ಯಾರ್ಥಿಗಳು ಒಂದುವೇಳೆ ಕ್ರೆಡಿಟ್ ಕಾರ್ಡ್ ಅನ್ನು ಪಡೆದುಕೊಳ್ಳುವುದು ಹೇಗೆ? ಏಕೆಂದರೆ ಅವರಿಗೆ ಆದಾಯ ಮೂಲ ಇರುವುದಿಲ್ಲ, ಹಾಗಾದರೆ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಪಡೆಯುವುದು ಹೇಗೆ? ಇದಕ್ಕೂ ಹಲವು ದಾರಿಗಳಿವೆ. ವಿಸ್ತಾರ ಮನಿ ಪ್ಲಸ್‌ನಲ್ಲಿ ಈ ಬಗ್ಗೆ ಸಕಲ ಮಾಹಿತಿ ಮತ್ತು ವಿಶ್ಲೇಷಣೆಯನ್ನು (Best Credit Cards For Students) ನೀಡಲಾಗಿದೆ.
ಕಾಲೇಜು ವಿದ್ಯಾರ್ಥಿಗಳಲ್ಲಿ ಅನೇಕ ಮಂದಿ ಕ್ರೆಡಿಟ್ ಕಾರ್ಡ್ ಪಡೆಯಲು ಹೋಗಿ ಕೈಸುಟ್ಟುಮಾಡಿಕೊಂಡಿದ್ದಾರೆ. ಮಾತ್ರವಲ್ಲದೆ ಕ್ರೆಡಿಟ್ ಸ್ಕೋರ್ ಅನ್ನೂ ಕಳೆದುಕೊಂಡಿದ್ದಾರೆ. ಪೋಷಕರು ಮಕ್ಕಳಿಗೆ ಕ್ರೆಡಿಟ್ ಕಾರ್ಡ್ ಕೊಡುವಾಗ ಯಾವೆಲ್ಲ ಎಚ್ಚರಿಕೆ ವಹಿಸಬೇಕು? ಈ ಎಲ್ಲ ಮಾಹಿತಿಗಳನ್ನು ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್ ಎಡಿಟರ್ ಆಗಿರುವ ಶರತ್ ಎಂ.ಎಸ್ ಅವರು ಈ ವಿಡಿಯೊದಲ್ಲಿ ವಿವರಿಸಿದ್ದಾರೆ.
ನಿಮಗೆ ಗೊತ್ತಿದೆಯೇ, ವಿವೇಚನಾ ರಹಿತವಾಗಿ, ಬೇಕಾಬಿಟ್ಟಿಯಾಗಿ, ಸುಮ್ಮಸುಮ್ಮನೆ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ, ಕ್ರೆಡಿಟ್ ಸ್ಕೋರ್ ಕುಸಿಯುತ್ತದೆ. ಹಾಗಾದರೆ ವಿದ್ಯಾರ್ಥಿಗಳಿಗೆ ಬೇಕಾದ ಅರ್ಹತೆ ಏನು ಎಂಬುದನ್ನು ಶರತ್ ಅವರು ವಿವರಿಸಿದ್ದಾರೆ.