Site icon Vistara News

ವಿಸ್ತಾರ MoneyGuide: 2022ರಲ್ಲಿ ತೆರಿಗೆ ಉಳಿತಾಯ ಮಾಡಿ ಕೊಡುವ ಉತ್ತಮ ಮ್ಯೂಚುವಲ್‌ ಫಂಡ್‌ಗಳು ಯಾವುವು?

elss fund

ನವದೆಹಲಿ: ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆಯಲ್ಲಿ ಉಳಿತಾಯವನ್ನೂ ಮಾಡಬಹುದು. ಒಂದು ಕಡೆ ಹೂಡಿಕೆಯ ಪ್ರಯೋಜನ ಸಿಕ್ಕಿದರೆ, ಮತ್ತೊಂದು ಕಡೆ ತೆರಿಗೆ ವಿಚಾರದಲ್ಲೂ ದುಡ್ಡು ಉಳಿಸಬಹುದು.

Tax saving mutual funds ಅಥವಾ Equity Linked Savings Schemes (ELSS) ಎಂಬ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಹೂಡಿಕೆ ಮಾಡುವುದರ ಮೂಲಕ ನೀವು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಬಹುದು. ELSS ಯೋಜನೆಗಳ ಅಡಿಯಲ್ಲಿ ನೀವು ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಮತ್ತು ತೆರಿಗೆ ಉಳಿತಾಯ ಸೌಲಭ್ಯ ಪಡೆಯಬಹುದು.

ELSS ಮ್ಯೂಚುವಲ್‌ ಫಂಡ್‌ಗಳು ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಆದ್ದರಿಂದ ಅವುಗಳಲ್ಲಿ ರಿಸ್ಕ್‌ ಕೂಡ ಇರುತ್ತದೆ. ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಮೊದಲ ಸಲ ಹೂಡಿಕೆ ಮಾಡುತ್ತಿದ್ದರೆ ಈ ಅಂಶವನ್ನು ಗಮನಿಸುವುದು ಸೂಕ್ತ. ಸಾರ್ವಜನಿಕ ಭವಿಷ್ಯನಿಧಿ, ಅಂಚೆ ಉಳಿತಾಯ ಯೋಜನೆಗಳ ಮಾದರಿಯಲ್ಲಿ ಖಾತರಿಯ ಆದಾಯವನ್ನು ಇದು ನೀಡದು. ಹಾಗಾದರೆ ELSS ಏಕೆ ಅಗತ್ಯ?

ಹೆಚ್ಚಿನ ಆದಾಯಕ್ಕಾಗಿ ELSS ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಸಾರ್ವಜನಿಕ ಭವಿಷ್ಯನಿಧಿ, ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳಿಗಿಂತ ಹೆಚ್ಚು ಆದಾಯವನ್ನು ಇವುಗಳು ನೀಡುವ ಸಾಧ್ಯತೆ ಇದೆ. ಇವುಗಳು ಷೇರುಗಳಲ್ಲಿ ಹೂಡುವುದರಿಂದ ಹಾಗೂ ಷೇರುಗಳು ಕಾಲಕ್ರಮೇಣ ಹೆಚ್ಚು ಆದಾಯ ನೀಡುವುದರಿಂದ ELSS ಕೂಡ ಹೆಚ್ಚು ಆದಾಯ ನೀಡುತ್ತದೆ. ಉದಾಹರಣೆಗೆ ELSS ಕಳೆದ 10 ವರ್ಷಗಳಲ್ಲಿ ಸರಾಸರಿ 15% ಆದಾಯ ನೀಡಿವೆ.

ಎರಡನೆಯದಾಗಿ ELSS ಯೋಜನೆಗಳಲ್ಲಿ ಲಾಕ್‌ ಇನ್‌ ಅವಧಿ ಕಡಿಮೆ. ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯಕ್ಕೆ ಸಹಕರಿಸುವ ಇತರ ಬಹುತೇಕ ಯೋಜನೆಗಳು ಸರಕಾರದ ಬೆಂಬಲಿತ ಯೋಜನೆಗಳು ಹಾಗೂ ಅವುಗಳಲ್ಲಿ ಲಾಕ್‌ ಇನ್‌ ಅವಧಿ ದೀರ್ಘವಾಗಿರುತ್ತದೆ. ಉದಾಹರಣೆಗೆ ಸಾರ್ವಜನಿಕ ಭವಿಷ್ಯನಿಧಿ (PPF) 15 ವರ್ಷಗಳ ಯೋಜನೆಯಾಗಿದ್ದು, 6 ವರ್ಷಗಳ ಲಾಕ್ ಇನ್‌ ಅವಧಿಯನ್ನು ಒಳಗೊಂಡಿದೆ.‌ ಅಂದರೆ 6 ವರ್ಷಗಳ ಬಳಿಕ ಭಾಗಶಃ ಹೂಡಿಕೆ ಹಿಂತೆಗೆತ ಸಾಧ್ಯ. ಎನ್‌ಎಸ್‌ಇ 5 ವರ್ಷಗಳ ಅವಧಿಯನ್ನು ಒಳಗೊಂಡಿದೆ. ಆದ್ದರಿಂದ ನೀವು 3 ವರ್ಷಗಳ ಅವಧಿಗೆ ಹೂಡಲು ಬಯಸುವುದಿದ್ದರೆ ELSS ಆಯ್ಕೆ ಮಾಡುವುದು ಒಳಿತು. ಹೀಗಿದ್ದರೂ, ಉತ್ತಮ ಆದಾಯಕ್ಕಾಗಿ ದೀರ್ಘಕಾಲೀನವಾಗಿ ELSSಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಕನಿಷ್ಠ 5-7 ವರ್ಷ ಹೂಡಿಕೆ ಮುಂದುವರಿಸಿದರೆ ಒಳ್ಳೆಯ ಆದಾಯ ಗಳಿಸಬಹುದು ಎನ್ನುತ್ತಾರೆ ತಜ್ಞರು.

ಆರಂಭಿಕ ಹೂಡಿಕೆಯಾಗಿ ಬೆಸ್ಟ್

ಮ್ಯೂಚುವಲ್‌ ಫಂಡ್‌ಗಳಲ್ಲಿ ಆರಂಭಿಕ ಹಂತದಲ್ಲಿ ಹೂಡಿಕೆ ಮಾಡಲು ಬಯಸುವವರು ELSS ಆಯ್ಕೆ ಮಾಡುವುದು ಉತ್ತಮ. ಮೂರು ವರ್ಷಗಳ ಲಾಕ್‌ ಇನ್‌ ಅವಧಿಯಲ್ಲಿ ಷೇರು ಮಾರುಕಟ್ಟೆಯ ಏರಿಳಿತಗಳ ವಿರುದ್ಧ ಫಂಡ್‌ ಹೇಗೆ ಲಾಭದಾಯಕ ಎಂಬುದು ಗೊತ್ತಾಗುತ್ತದೆ. ಹೂಡಿಕೆಯ ಶಿಸ್ತು ರೂಪಿಸಲು ಸಹಕಾರಿ.

2022ರಲ್ಲಿ ಹೂಡಿಕೆಗೆ ಪರಿಶೀಲಿಸಬಹುದಾದ ELSS ಮ್ಯೂಚುವಲ್‌ ಫಂಡ್‌ ಯೋಜನೆಗಳು

Exit mobile version