Site icon Vistara News

Zerodha : ಬೆಂಗಳೂರಿನ ಜೆರೋಧಾದ ನಿತಿನ್‌, ನಿಖಿಲ್‌ ಕಾಮತ್‌ ಸೋದರರನ್ನು ಶ್ಲಾಘಿಸಿದ ಬಿಲ್‌ ಗೇಟ್ಸ್

zerodha

#image_title

ಬೆಂಗಳೂರು: ಆನ್‌ಲೈನ್‌ ಬ್ರೋಕರೇಜ್‌ ಸಂಸ್ಥೆ ಜೆರೋಧಾದ ಸ್ಥಾಪಕರಾದ (Zerodha) ನಿತಿನ್‌ ಕಾಮತ್‌ ಮತ್ತು ನಿಖಿಲ್‌ ಕಾಮತ್‌ ಅವರು ಹವಾಮಾನ ಬದಲಾವಣೆಯ ವಿಚಾರದಲ್ಲಿ ನೀಡುತ್ತಿರುವ ಬೆಂಬಲ ಅಪಾರವಾಗಿದೆ ಎಂದು ಮೈಕ್ರೊಸಾಫ್ಟ್‌ ಸ್ಥಾಪಕ ಬಿಲ್‌ಗೇಟ್ಸ್‌ ಶ್ಲಾಘಿಸಿದ್ದಾರೆ.

ಇತ್ತೀಚಿನ ಭಾರತ ಪ್ರವಾಸದ ವೇಳೆ ಬಿಲ್‌ ಗೇಟ್ಸ್‌ ಅವರು ಕಾಮತ್‌ ಸೋದರರನ್ನು ಭೇಟಿಯಾಗಿದ್ದರು. ಬ್ರೇಕ್‌ ಫಾಸ್ಟ್ ಮಾತುಕತೆ ನಡೆಸಿದ್ದರು. ಬಳಿಕ ಇದೀಗ ಟ್ವೀಟ್‌ ಮಾಡಿರುವ ಅವರು, ಭಾರತದಲ್ಲಿ ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಹೆಸರಾಗಿರುವ ಯುವ ಉದ್ಯಮಿಗಳಾದ ನಿತಿನ್‌ ಮತ್ತು ನಿಖಿಲ್‌ ಕಾಮತ್‌ ಅವರಿಂದ ನಾನು ಪ್ರಭಾವಿತನಾಗಿರುವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Exit mobile version