Site icon Vistara News

Bima Sugam | ಆನ್‌ಲೈನ್‌ನಲ್ಲಿ ಒಂದೇ ಕಡೆ ಎಲ್ಲ ವಿಮೆಗಳನ್ನು ಖರೀದಿಸಲು ಬಿಮಾ ಸುಗಮ್‌ ವೆಬ್‌ ಪೋರ್ಟಲ್ ಶೀಘ್ರ

Online insurence

ನವ ದೆಹಲಿ: ದೇಶದಲ್ಲಿ ಎಲ್ಲ ಬಗೆಯ ವಿಮೆ ಉತ್ಪನ್ನಗಳನ್ನು ಖರೀದಿಸಲು ಅನುಕೂಲವಾಗುವಂತೆ 2023ರ ಜನವರಿ 1 ರಿಂದ ಬಿಮಾ ಸುಗಮ್‌ (Bima Sugam) ಎಂಬ ವೆಬ್‌ ಪೋರ್ಟಲ್‌ ಅಸ್ತಿತ್ವಕ್ಕೆ ಬರಲಿದೆ. ವಿಮೆ ನಿಯಂತ್ರಕ ಪ್ರಾಧಿಕಾರ ಐಆರ್‌ಡಿಎಐ ಈ ಯೋಜನೆಯನ್ನು ಘೋಷಿಸಿದೆ. ಸಾಮಾನ್ಯ ವಿಮೆ, ಜೀವ ವಿಮೆ, ಆರೋಗ್ಯ ವಿಮೆ ಉತ್ಪನ್ನಗಳ ಮಾರಾಟ ನಡೆಯಲಿದೆ.

ಈ ವೆಬ್‌ ಪೋರ್ಟಲ್‌ ಮೂಲಕ ವಿಮೆ ಪಾಲಿಸಿಗಳನ್ನು ಡಿಮ್ಯಾಟ್‌ ಸ್ವರೂಪದಲ್ಲಿ ಇಡಲು ಕೂಡ ಹಾದಿ ಸುಗಮವಾಗಲಿದೆ. ವಿಮೆ ಪಾಲಿಸಿಗಳ ಕ್ಲೇಮ್‌ಗಳ ನಿರ್ವಹಣೆಯನ್ನು ಮಾಡಬಹುದು. ವಿಮೆ ವಲಯದ ಸಮಕಾಲೀನ ಟ್ರೆಂಡ್‌ಗಳನ್ನು ಗುರುತಿಸಲು ಐಆರ್‌ಡಿಎಐಗೂ ಇದು ಸಹಾಯಕವಾಗಲಿದೆ. ಗ್ರಾಹಕರ ಅಗತ್ಯಗಳು, ಉತ್ಪನ್ನಗಳ ಮಹತ್ವವನ್ನು ಮನಗಾಣಲು ಸಹಾಯಕವಾಗಲಿದೆ.

ನೇರ ಮಾರಾಟ: ಬಿಮಾ ಸುಗಮ್‌ ವೆಬ್‌ ಪೋರ್ಟಲ್‌ನಲ್ಲಿ ಯಾವುದೇ ಸಂಕೀರ್ಣ ಪೇಪರ್‌ ವರ್ಕ್‌ನ ಅಗತ್ಯ ಇಲ್ಲದೆಯೇ, ಡಿಮ್ಯಾಟ್‌ ರೂಪದಲ್ಲಿ ವಿಮೆ ಪಾಲಿಸಿಗಳನ್ನು ಸುಲಭವಾಗಿ ಇಟ್ಟುಕೊಳ್ಳಬಹುದು. ನವೀಕರಣ ಮತ್ತು ಕ್ಲೇಮ್‌ ಕೂಡ ಸುಲಭವಾಗಲಿದೆ. ಇದರಿಂದ ವಿಮೆ ಪಾಲಿಸಿಗಳೂ ಅಗ್ಗವಾಗುವ ನಿರೀಕ್ಷೆ ಇದೆ. ಏಕೆಂದರೆ ಏಜೆಂಟರಿಗೆ ಕೊಡುವ ಕಮೀಶನ್‌ ಇಲ್ಲಿ ಉಳಿಯುತ್ತದೆ. ಈ ವ್ಯವಸ್ಥೆ ಪಾರದರ್ಶಕವಾಗಿ ಇರುವುದರಿಂದ ಗ್ರಾಹಕರು ಮಿಸ್-ಸೆಲ್ಲಿಂಗ್‌ನಿಂದ ವಂಚನೆಯಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ತಜ್ಞರು.

Exit mobile version