ನವದೆಹಲಿ: ಭಾರತೀಯ ಷೇರು ಪೇಟೆ (Indian Stock Market) ಬುಧವಾರ ಭಾರೀ ನಷ್ಟವನ್ನು ದಾಖಲಿಸಿದೆ. ಜಾಗತಿಕ ಬೆಳವಣಿಗಳು ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳ ಪತನದ ಪರಿಣಾಮ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿಗಳೆರಡೂ (Nifty) ಭಾರೀ ಕುಸಿತವನ್ನು ದಾಖಲಿಸಿದವು. ಸೆನ್ಸೆಕ್ಸ್ 1,628 ಕುಸಿತ ಕಂಡು 71,501 ಅಂಕಗಳಲ್ಲಿ ಅಂತ್ಯವಾಯಿತು. ಇದೇ ವೇಳೆ, 50 ನಿಫ್ಟಿ ಕೂಡ 460 ಅಂಕಗಳನ್ನು ಇಳಿಕೆ ಕಂಡು ದಿನದಾಂತ್ಯಕ್ಕೆ 21,572 ಅಂಕ ದಾಖಲಿಸಿತು. ಪರಿಣಾಮ ಹೂಡಿಕೆದಾರರಿಗೆ ಅಂದಾಜು 4 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ(Investors Faces Loss).
ಎರಡೂ ಮಾನದಂಡಗಳು ಸೆನ್ಸೆಕ್ಸ್ ಮಿಡ್‌ಕ್ಯಾಪ್ ಸೂಚ್ಯಂಕದಲ್ಲಿ ಶೇಕಡಾ 1 ರಷ್ಟು ಕಡಿತಕ್ಕೆ ವಿರುದ್ಧವಾಗಿ ಪ್ರತಿ ಶೇಕಡಾ 2 ಕ್ಕಿಂತ ಕಡಿಮೆಯಾಗಿದೆ. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕದಲ್ಲಿ ಶೇಕಡಾ 0.9 ರಷ್ಟು ಕುಸಿದಿದೆ. ವಾಲಟಿಲಿಟಿ ಗೇಜ್, ಇಂಡಿಯಾ ವಿಟಿಎಕ್ಸ್ ಶೇ.11 ಹೆಚ್ಚು ಏರಿಕೆ ಕಂಡವು.
ಎಚ್‌ಡಿಎಫ್‌ಸಿ ಬ್ಯಾಂಕ್ ಬುಧವಾರ ಶೇ.8ರಷ್ಟು ಕುಸಿತ ದಾಖಲಿಸಿದ್ದು ಷೇರು ಪೇಟೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು. ಟಾಟಾ ಸ್ಟೀಲ್, ಕೋಟಕ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಸ್‌ಬಿಐ, ಬಜಾಜ್ ಫೈನಾನ್ಸ್, ಟಾಟಾ ಮೋಟಾರ್ಸ್, ಏಷ್ಯನ್ ಪೇಂಟ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಮಾರುತಿ ಸುಜುಕಿ, ಐಟಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಕುಸಿತವನ್ನು ದಾಖಲಿಸಿದವು.
ನಿಫ್ಟಿ ಬ್ಯಾಂಕ್ ವಲಯದಲ್ಲಿ ಹಣಕಾಸು ಸೇವೆಗಳು, ಖಾಸಗಿ ಬ್ಯಾಂಕುಗಳು ತಲಾ ಶೇ.4ರಷ್ಟು ಕುಸಿತವನ್ನು ಕಂಡವು. ನಿಫ್ಟಿ ಮೆಟಲ್ ಶೇ.3ರಷ್ಟು ಕುಸಿತ ಕಂಡರೆ, ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇ.1.7ರಷ್ಟು ಕುಸಿತವನ್ನು ಕಂಡಿತು. ಆದರೆ, ನಿಫ್ಟಿ ಐಟಿ ಸೂಚ್ಯಂಕವು ಶೇ.065 ಏರಿಕೆಯನ್ನು ಕಂಡಿತು.
ಕೆಲವು ವಿಶ್ಲೇಷಕರ ಪ್ರಕಾರ ಮುಂದಿನ ಕೆಲವು ದಿನಗಳ ಕಾಲವು ಷೇರು ಪೇಟೆ ಕುಸಿತದ ಹಾದಿಯನ್ನು ಹಿಡಿಯಲಿದೆ. ಜಾಗತಿಕ ಮತ್ತು ದೇಶಿ ಮಾರುಕಟ್ಟೆಯಲ್ಲಿ ಋಣಾತ್ಮಕ ಬೆಳವಣಿಗೆಗಳು ಪರಿಣಾಮವೇ ಇದಕ್ಕೆ ಕಾರಣವಾಗಲಿದೆ. ಅಮೆರಿಕ ಬಾಂಡ್ ಲಾಭದಲ್ಲಿ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಹಾಗೆಯೇ ಅಮೆರಿಕವು ಬಡ್ಡಿ ದರದಲ್ಲಿ ಕಡಿತವನ್ನು ನಿರೀಕ್ಷಿಸಲಾಗುತ್ತಿದೆ. ಇದು ಜಾಗತಿಕ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತಿದೆ.
ಈ ಸುದ್ದಿಯನ್ನೂ ಓದಿ: Stock Market: 73 ಸಾವಿರ ಅಂಕ ದಾಟಿದ ಸೆನ್ಸೆಕ್ಸ್; ವಿಪ್ರೋ, ಟಿಸಿಎಸ್ ಷೇರು ಏರಿಕೆ