Site icon Vistara News

Privatisation | ಸಾರ್ವಜನಿಕ ವಲಯದ 8 ರಸಗೊಬ್ಬರ ಕಂಪನಿಗಳ ಖಾಸಗೀಕರಣಕ್ಕೆ ಬ್ರೇಕ್

fertiliser

ನವ ದೆಹಲಿ: ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ 8 ರಸಗೊಬ್ಬರ ಕಂಪನಿಗಳ ಖಾಸಗೀಕರಣ (Privatisation ) ಪ್ರಸ್ತಾಪವನ್ನು ತಡೆ ಹಿಡಿದಿದೆ.

ಸ್ಥಳೀಯ ಉತ್ಪಾದನೆ ಹೆಚ್ಚಳ ಮತ್ತು ಆಮದು ಅವಲಂಬನೆಯನ್ನು ತಗ್ಗಿಸುವ ಉದ್ದೇಶದಿಂದ ಸರ್ಕಾರ ಕಾರ್ಯಪ್ರವೃತ್ತವಾಗಿದ್ದು, ಖಾಸಗೀಕರಣವನ್ನು ಸದ್ಯಕ್ಕೆ ತಡೆ ಹಿಡಿದಿದೆ.

ಮುಂದಿನ 2-3 ವರ್ಷಗಳ ಕಾಲ ಇವುಗಳ ಖಾಸಗೀಕರಣಕ್ಕೆ ಕಾಲ ಪಕ್ವವಾಗಿಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಬ್ರೇಕ್‌ ಹಾಕಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಕೆಮಿಕಲ್ಸ್‌ & ಫರ್ಟಿಲೈಸರ್ಸ್‌ (RCF) ಮತ್ತು ನ್ಯಾಶನಲ್‌ ಫರ್ಟಿಲೈಸರ್ಸ್‌ (NFL) ಸೇರಿದಂತೆ ಎಂಟು ಕಂಪನಿಗಳನ್ನು ನೀತಿ ಆಯೋಗ ಬಂಡವಾಳ ಹಿಂತೆಗೆತಕ್ಕೆ ಗುರುತಿಸಿತ್ತು.

Exit mobile version