ದಾವೋಸ್: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ತೈಲ ದರ ಪ್ರತಿ ಬ್ಯಾರೆಲ್‌ಗೆ ಸೋಮವಾರ 113 ಡಾಲರ್‌ಗೆ ಏರಿಕೆಯಾಗಿದ್ದು, ಭಾರತದಂಥ ತೈಲ ಆಮದುದಾರ ರಾಷ್ಟ್ರಗಳಿಗೆ ಭಾರಿ ಸವಾಲಾಗಿ ಪರಿಣಮಿಸಿದೆ.
ಕಚ್ಚಾ ತೈಲ ದರ ಏರಿಕೆ ಬೇಡಿಕೆಯನ್ನು ತಗ್ಗಿಸಬಹುದು ಎಂಬ ಆತಂಕದ ನಡುವೆಯೂ ಬ್ರೆಂಟ್ ಕಚ್ಚಾ ತೈಲ ದರ ಜಿಗಿದಿದೆ.
ಹಣದುಬ್ಬರಕ್ಕಿಂತ ಅಪಾಯಕಾರಿ ತೈಲ ದರ
ಪ್ರತಿ ಬ್ಯಾರೆಲ್‌ಗೆ 110 ಡಾಲರ್ ಮಟ್ಟದಲ್ಲಿ ಕಚ್ಚಾ ತೈಲ ದರ ಮುಂದುವರಿಯುವುದು ಹಣದುಬ್ಬರಕ್ಕಿಂತಲೂ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ತೈಲ ದರಗಳು 110 ಡಾಲರ್‌ಗಿಂತ ಮೇಲಿನ ಮಟ್ಟದಲ್ಲಿ ಮುಂದುವರಿದರೆ, ಹಣದುಬ್ಬರಕ್ಕಿಂತಲೂ ಹೆಚ್ಚಿನ ಅಪಾಯಕಾರಿಯಾದ ಆರ್ಥಿಕ ಹಿಂಜರಿತ ಸಂಭವಿಸಬಹುದು ಎಂದು ದಾವೋಸ್‌ನಲ್ಲಿ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಲಯಕ್ಕೆ ತೈಲ ಮಾರಾಟದಲ್ಲಿ ಬಿಕ್ಕಟ್ಟು
ಸಾರ್ವಜನಿಕ ಕಂಪನಿಗಳು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಾರಾಟ ಮಾಡುತ್ತಿರುವುದರಿಂದ ಖಾಸಗಿ ತೈಲ ಕಂಪನಿಗಳು ಸಂಕಷ್ಟಕ್ಕೀಡಾಗಿವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಬಿಪಿ ಸಹಭಾಗಿತ್ವದ ಆರ್‌ಬಿಎಂಎಲ್ ತೈಲ ಕಂಪನಿ ತಿಳಿಸಿದೆ.
ಖಾಸಗಿ ತೈಲ ಕಂಪನಿಗಳಿಗೆ ಪ್ರತಿ ಲೀಟರ್ ಪೆಟ್ರೋಲ್ ಮಾರಾಟದಲ್ಲಿ 13 ರೂ. ಮತ್ತು ಡೀಸೆಲ್ ಮಾರಾಟದಲ್ಲಿ 24 ರೂ. ನಷ್ಟವಾಗುತ್ತಿದೆ ಎಂದು ಆರ್‌ಬಿಎಂಎಲ್ ತಿಳಿಸಿದೆ.
ಸಾರ್ವಜನಿಕ ತೈಲ ಕಂಪನಿಗಳು ಕಳೆದ 2021 ರ ನವೆಂಬರ್ ಆರಂಭದಿಂದ ತೈಲ ದರಗಳ ಏರಿಕೆಯನ್ನು ತಡೆ ಹಿಡಿದಿವೆ.
ಇದನ್ನೂ ಓದಿ: ಸಾರ್ವಜನಿಕ ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರ ಏರಿಸುವ ಸಾಧ್ಯತೆ ಇದೆಯೇ?